ಬಸ್‌ ಟಿಕೆಟ್‌ ದರ ಗರಿಷ್ಠ 9 ರೂ. ಹೆಚ್ಚಳ! ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ ಹೊಸ ದರ!!

ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಗರಿಷ್ಠ 9 ರೂಪಾಯಿಗಳವರೆಗೆ ಪ್ರಯಾಣ ದರ ಏರಿಕೆ ಮಾಡಲಾಗಿದ್ದು, ಪ್ರಯಾಣಿಕರಿಗೆ ನೇರ ಆರ್ಥಿಕ ಬಿಸಿ ತಟ್ಟಿದೆ. ಪ್ರಮುಖವಾಗಿ ಮೆಜೆಸ್ಟಿಕ್‌ನಿಂದ ಉಪನಗರಗಳಿಗೆ ಸಂಚರಿಸುವ ದರಗಳಲ್ಲಿ ಗಣನೀಯ ಏರಿಕೆಯಾಗಿದೆ. ಈ ದರ ಏರಿಕೆಯ ಕುರಿತು ಸ್ಪಷ್ಟನೆ ನೀಡಿರುವ ಸಾರಿಗೆ ಸಚಿವ ಭೈರತಿ ಸುರೇಶ್, ಟಿಕೆಟ್ ದರವನ್ನು ಒಟ್ಟಾರೆಯಾಗಿ ಶೇಕಡಾವಾರು (%) ಲೆಕ್ಕದಲ್ಲಿ ಏರಿಕೆ ಮಾಡಿಲ್ಲ. ಬದಲಾಗಿ ಬಸ್ ಪ್ರಯಾಣದ ಹಂತಗಳ (Stage) ಲೆಕ್ಕಾಚಾರದಲ್ಲಿ ಮಾತ್ರ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

ದರ ಏರಿಕೆಯ ವಿಧಾನವನ್ನು ವಿವರಿಸಿದ ಸಚಿವರು, “ನಾವು ಯಾವುದೇ ಒಟ್ಟಾರೆ ಶೇಕಡಾವಾರು ಆಧಾರದಲ್ಲಿ ದರ ಹೆಚ್ಚಳ ಮಾಡಿಲ್ಲ. ಬಸ್‌ ಸಂಚರಿಸುವ ಕಿಲೋಮೀಟರ್‌ ಹಾಗೂ ನಿಗದಿತ ಹಂತಗಳ ಲೆಕ್ಕಾಚಾರದಲ್ಲಿ ಮಾತ್ರ ದರ ಪರಿಷ್ಕರಣೆ ಮಾಡಿದ್ದೇವೆ. ಇದರಿಂದಾಗಿ ಕಡಿಮೆ ದೂರ ಪ್ರಯಾಣಿಸುವವರಿಗೆ ಕನಿಷ್ಠ ಹಾಗೂ ದೂರದ ಉಪನಗರಗಳಿಗೆ ಸಂಚರಿಸುವವರಿಗೆ ಗರಿಷ್ಠ ರೂ.9 ರವರೆಗೆ ದರ ಏರಿಕೆಯಾಗಿದೆ”. ಎಂದು ತಿಳಿಸಿದರು. ಈ ನೂತನ ಪರಿಷ್ಕೃತ ಬಸ್ ಪ್ರಯಾಣ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

Advertisement

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page