ಆಟೋರಿಕ್ಷಾದಲ್ಲಿ ಲಡಾಕ್‌ಗೆ ಸಂಚರಿಸಿದ ಉಳ್ಳಾಲದ ಯುವಕರು!! ಬರೋಬ್ಬರಿ 7 ಸಾವಿರ ಕಿಮೀ ದೂರ ಪಯಣ!!

ದಕ್ಷಿಣ ಕನ್ನಡದ ಉಳ್ಳಾಲದ ಯುವಕರು ಆಟೋರಿಕ್ಷಾದಲ್ಲಿ 7 ಸಾವಿರ ಕಿಮೀ ದೂರ ಸಂಚರಿಸಿ ಕಾಶ್ಮೀರ ಮತ್ತು ಲಡಾಖ್‌ ತಲುಪಿ ಸಾಧನೆ ಮಾಡಿದ್ದಾರೆ. ಆಟೋರಿಕ್ಷಾದಲ್ಲಿ 7ಸಾವಿರ km ದೂರ ಸಂಚರಿಸಿ ಕಾಶ್ಮೀರ ಮತ್ತು ಲಡಾಖ್‌ ತಲುಪುವುದು ಎಂದರೆ ತಮಾಷೆಯ ಮಾತಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಸ್ನೇಹಿತರಾದ ಸಾದಿಕ್‌, ಹಜೀಮ್‌, ಹಸನ್‌ ಮತ್ತು ಹಫೀದ್‌ ಈ ಅಸಾಧ್ಯವಾದ ಕನಸನ್ನು ನನಸು ಮಾಡಿ ಸಾಧನೆ ಮೆರೆದಿದ್ದಾರೆ. ಸುಮಾರು ಆರೇಳು ವರ್ಷಗಳಿಂದ ಮನಸ್ಸಿನಲ್ಲಿದ್ದ ಕಾಶ್ಮೀರ ಪ್ರವಾಸದ ಕನಸಿಗೆ ಅಕ್ಟೋಬರ್‌ 10ರಂದು ಈ ಯುವಕರು ಚಾಲನೆ ನೀಡಿದರು.

Advertisement

ಐಷಾರಾಮಿ ಕಾರು ಅಥವಾ ಬೈಕ್‌ಗಳ ಬದಲಿಗೆ ತಮ್ಮ ಬಳಿಯಿದ್ದ 2017ರ ಮಾಡೆಲ್‌ ಆಟೋರಿಕ್ಷಾವನ್ನೇ ಸಾರಥಿಯನ್ನಾಗಿ ಆಯ್ದುಕೊಂಡರು. ಸಾದಿಕ್‌ ಅವರ ಆಟೋವನ್ನು ಸುಮಾರು 1.5 ಲಕ್ಷ ರೂ ಬಜೆಟ್‌ ಹಾಗೂ 20 ಲೀಟರ್‌ ಹೆಚ್ಚುವರಿ ಪೆಟ್ರೋಲ್‌ನೊಂದಿಗೆ ಯಾತ್ರೆ ಆರಂಭಿಸಿದರು. ಎಕ್ಸ್‌ಪ್ರೆಸ್‌ ವೇಗದಲ್ಲಿ ಆಟೋಗೆ ಅವಕಾಶವಿಲ್ಲದ ಕಾರಣ ಸರ್ವಿಸ್‌ ರಸ್ತೆಗಳಲ್ಲೇ ದಿನಕ್ಕೆ ನೂರಾರು ಕಿಲೋಮೀಟರ್‌ ಜರ್ನಿ ಮಾಡಿದೆ. ಮಂಗಳೂರಿಗೆ ಮರಳಿರುವ ಈ ಸಾಧಕ ಯುವಕರಿಗೆ ಧೈರ್ಯ ಹಾಗೂ ಆಸಕ್ತಿಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page