ಒಳ ಉಡುಪಿನೊಳಗೆ ಮೇಣದ ರೂಪದಲ್ಲಿದ್ದ 1.68 ಕೆಜಿ ತೂಕದ ಚಿನ್ನದ ಧೂಳು!! ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರು ವಶಕ್ಕೆ!

ಮುಂಬೈ : ಬಹ್ರೇನ್‌ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ ಸುಮಾರು 2.09 ಕೋಟಿ ರೂಪಾಯಿ ಮೌಲ್ಯದ 1.68 ಕೆಜಿ ತೂಕದ ಚಿನ್ನದ ಧೂಳನ್ನು (ಗೋಲ್ಡ್ ಡಸ್ಟ್) ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

Advertisement

ಮಂಗಳವಾರ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಅನುಮಾನದ ಆಧಾರದ ಮೇಲೆ ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಯುನಿಟ್ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದ್ದಾರೆ.
ಈ ವೇಳೆ ಆರೋಪಿಗಳು ತಮ್ಮ ಒಳ ಉಡುಪುಗಳಲ್ಲಿ ಮೇಣದ ರೂಪದಲ್ಲಿದ್ದ ಚಿನ್ನದ ಧೂಳನ್ನು ರಹಸ್ಯವಾಗಿ ಬಚ್ಚಿಟ್ಟುಕೊಂಡು ತಂದಿರುವುದು ಪತ್ತೆಯಾಗಿದೆ. ಜಪ್ತಿ ಮಾಡಲಾದ ಈ ಹಳದಿ ಲೋಹದ ಮೌಲ್ಯವನ್ನು ಸರ್ಕಾರಿ ಅನುಮೋದಿತ ಮೌಲ್ಯ ಮಾಪಕರು ದೃಢೀಕರಿಸಿದ್ದು, ಕಸ್ಟಮ್ಸ್ ಕಾಯ್ದೆಯಡಿ ಸರಕನ್ನು ಜಪ್ತಿ ಮಾಡಲಾಗಿದೆ. ಚಿನ್ನದ ಕಳ್ಳಸಾಗಣೆ ಯತ್ನದ ಕುರಿತು ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Advertisement

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page