ಹೊಸದಿಲ್ಲಿ : ಪತ್ನಿಯನ್ನು “ಕೆಲಸಕ್ಕೆ ಬಾರದವಳು”, “ಪೆದ್ದಿ”ಎಂದು ಕರೆಯುವ ಪತಿಯ ಅಭ್ಯಾಸವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗದು. ಆ ರೀತಿ ಕರೆಯುವುದು ಆತನ ಸ್ವಭಾವದ ದೋಷವೇ ವಿನಾ ಕ್ರೌರ್ಯವಲ್ಲ. ಹೀಗಾಗಿ ಇಂತಹ ಕೃತ್ಯಗಳನ್ನು ಆತ್ಮಹತ್ಯೆಗೆ ಪ್ರಚೋದನೆ ಅಥವಾ ಕ್ರಿಮಿನಲ್ ಬೆದರಿಕೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮಹಿಳೆಯೊಬ್ಬಳ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾ. ಬಿ.ವಿ. ನಾಗರತ್ನ, ನ್ಯಾ. ಮನಮೋಹನ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ಘಟನೆಗೆ ಸಂಬಂಧಿಸಿ ಸ್ಪಷ್ಟ ಸಾಕ್ಷ್ಯಾಧಾರಗಳಿಲ್ಲದೆ ಪತಿ ಮತ್ತು ಆತನ ಕುಟುಂಬದವರನ್ನು ಆತ್ಮಹತ್ಯೆಗೆ ಕಾರಣರು ಎಂದು ಆರೋಪಿಸುವುದು ಕಾನೂನಿನ ದುರ್ಬಳಕೆಯಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.















