ಲಂಡನ್: ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ವಿದೇಶದಲ್ಲೂ ಹರಡುತ್ತಿರುವ ಸಾಕ್ಷಿಯಾಗಿ, ಲಂಡನ್ನ ಪ್ರಸಿದ್ಧ ಥೇಮ್ಸ್ ನದಿಯ ತಟದಲ್ಲಿ ಪ್ರಥಮ ಬಾರಿಗೆ ವೈಭವಪೂರ್ಣ ‘ಗಂಗಾ ಆರತಿ’ ಪೂಜಾ ಕಾರ್ಯಕ್ರಮವನ್ನು ನಡೆದಿದೆ.
ʼಚಿನ್ಮಯ ಮಿಷನ್ ಯುಕೆ’ ಹಾಗೂ ‘ಟೋಟಲಿ ಥೇಮ್ಸ್’ ಉತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ ಭಕ್ತಿಪರವಶರಾದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಚಿನ್ಮಯ ಮಿಷನ್ನ ಬ್ರಹ್ಮಚಾರಿಣಿ ಶ್ರೀಪ್ರಿಯಾ ಚೈತನ್ಯ, “ಭಾರತದಲ್ಲಿ ಗಂಗಾ ನದಿಯ ತೀರದಲ್ಲಿ ಪ್ರಕೃತಿ ಮತ್ತು ಜೀವನಕ್ಕೆ ನೀರು ನೀಡಿದ ಪವಿತ್ರ ನದಿಗೆ ಕೃತಜ್ಞತೆ ಸಲ್ಲಿಸಲು ಆರತಿ ಬೆಳಗಲಾಗುತ್ತದೆ. ಅದೇ ಕೃತಜ್ಞತೆ, ಭರವಸೆ ಮತ್ತು ಐಕ್ಯತೆಯ ಭಾವನೆಯನ್ನು ಲಂಡನ್ನ ಥೇಮ್ಸ್ ನದಿ ತೀರಕ್ಕೂ ತರುವುದು ನಮ್ಮ ಉದ್ದೇಶವಾಗಿತ್ತು,” ಎಂದು ತಿಳಿಸಿದರು.
ಚಿನ್ಮಯ ಮಿಷನ್ನ 75ನೇ ವರ್ಷದ ಸಂಸ್ಥಾಪನಾ ಮಹೋತ್ಸವದ ಅಂಗವಾಗಿ ನಡೆದ ಈ ಸಮಾರಂಭದಲ್ಲಿ ಬ್ರಿಟನ್ನಲ್ಲಿರುವ ಭಾರತೀಯ ಸಮುದಾಯದವರು ಮಾತ್ರವಲ್ಲದೆ, ವಿವಿಧ ದೇಶ ಹಾಗೂ ಧರ್ಮಗಳ ಸಾವಿರಾರು ಸಾರ್ವಜನಿಕರು ಭಾಗವಹಿಸಿ ಪ್ರಕೃತಿ ರಕ್ಷಣೆಯ ಸಂದೇಶಕ್ಕೆ ಸಾಕ್ಷಿಯಾದರು.













