ಒಂದು ರೂಪಾಯಿ ಕೊಡದ ಲಾಟ್‌ಪೋಟುಗಳು ದೇವಸ್ಥಾನದಲ್ಲಿ ಅಕ್ರಮವಾಗಿದೆ ಎನ್ನುತ್ತಿದ್ದಾರೆ! ದೇವಸ್ಥಾನದ ಜಾಗ ಒಳಗೆ ಹಾಕಿದವರೇ ದೇವಸ್ಥಾನದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ!! ಶಾಸಕ ಅಶೋಕ್‌ ಕುಮಾರ್‌ ರೈ ತೀವ್ರ ಆಕ್ರೋಶ!!!

ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ನಾನು ಪಣತೊಟ್ಟಿದ್ದೇನೆ. ಮುಖ್ಯಮಂತ್ರಿಗಳು ಮಂಗಳೂರಿಗೆ ಬಂದಾಗ 5 ಕೋಟಿ ದೇವಸ್ಥಾನಕ್ಕೆ ಅನುದಾನ ಕೊಡಿಸುವ ಕೆಲಸವನ್ನು ಮಾಡಿದ್ದೇನೆ, ಜೊತೆಗೆ 10 ಕೋಟಿ ಶಾಸಕರ ಅನುದಾನದಲ್ಲಿ ಕೊಡುತ್ತೇನೆಂದು ಹೇಳಿದ್ದೇನೆ ಮತ್ತು ವಯಕ್ತಿಕ ನೆಲೆಯಲ್ಲಿ 1 ಕೋಟಿ ಕೊಡುತ್ತೇನೆಂದು ಈಗಾಗಲೇ ಹೇಳಿದ್ದೇನೆ. 100 ಗ್ರಾಂ ಬಂಗಾರವನ್ನೂ ದೇವರಿಗೆ ಸಮರ್ಪಿಸಿದ್ದೇನೆ. ಆದರೆ ಒಂದು ರೂಪಾಯಿಯೂ ಕೊಡದ ಲಾಟ್‌ಪೋಟುಗಳು ದೇವಸ್ಥಾನದಲ್ಲಿ ಅಕ್ರಮವಾಗಿದೆ ಎನ್ನುತ್ತಿದ್ದಾರೆ ಎಂದು ಪುತ್ತೂರಿನ ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದರು.

Advertisement

ಅವರು ಉಪ್ಪಿನಂಗಡಿಯಲ್ಲಿ ನಡೆದ ಅಕ್ರಮ-ಸಕ್ರಮ ಬಗರ್‌ ಹುಕುಂ 28ನೇ ಬೈಠಕ್‌ ಮತ್ತು ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement
Advertisement

ಇನ್ನು ಬಿಜೆಪಿಯ ಪ್ರತಿಭಟನೆಗೆ ತೆರಳಿದ ಪೆದ್ದ ಜನಗಳಿಗೆ ಬುದ್ಧಿ ಹೇಳುವವರು ಯಾರು? ನಾನು ಕೆರಳಿದರೆ ಇವರ ಎಲ್ಲಾ ಹಣೆಬರಹಗಳನ್ನು ಹೇಳಬೇಕಾಗುತ್ತದೆ. ದೇವಸ್ಥಾನದ ಜಾಗವನ್ನು ಒಳಗೆ ಹಾಕಿದವರೇ ಇಂದು ದೇವಸ್ಥಾನದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ನಮ್ಮ ರಾಜಕೀಯ ಪರಿಸ್ಥಿತಿ. ದೇವಸ್ಥಾನದ 18 ಎಕರೆ ಜಾಗವನ್ನು ದೇವಸ್ಥಾನಕ್ಕೆ ಮರಳಿ ಸೇರಿದ್ದು ನಾವು. ಬಿಜೆಪಿಯವರಿಗೆ ಮುಂಚೆ ಶಕ್ತಿ ಇರಲಿಲ್ಲವಾ, ಧಮ್‌-ಗಂಡಸ್ತನ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ಇಲ್ಲಿಗೇ ಮುಗಿಯಲ್ಲ. ಯಾರು ದೇವಸ್ಥಾನದ ಜಾಗ ಒಳಗೆ ಹಾಕಿಕೊಂಡರೂ ನಾವು ಬಿಡುವುದಿಲ್ಲ. ಹಂತ ಹಂತವಾಗಿ ಆಕ್ರಮಿಸಿಕೊಂಡ ಎಲ್ಲಾ ಜಾಗವನ್ನೂ ದೇವಸ್ಥಾನಕ್ಕೆ ಕೊಡಿಸುತ್ತೇವೆ. ಪುತ್ತೂರಿನ ದೇವಸ್ಥಾನವೂ ಸುಬ್ರಹ್ಮಣ್ಯ ಧರ್ಮಸ್ಥಳದ ರೀತಿ ಆಗಬೇಕು. ದೂರದ ಊರುಗಳಿಂದ ಜನರು ಇಲ್ಲಿಗೆ ಬರಬೇಕು. ಇನ್ನೂ ದೊಡ್ಡ ಮಟ್ಟದಲ್ಲಿ ಪುತ್ತೂರು ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಬೇಕು ಎಂದು ಹೇಳಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page