ಹೊಸದಿಲ್ಲಿ: ಸಿಬ್ಬಂದಿ ಕೊರತೆ, ನೇಮಕಾತಿ, ತಿಂಗಳಿನಲ್ಲಿ ಎಲ್ಲ ಶನಿವಾರ ರಜೆ ನೀಡಬೇಕು ಎಂಬ ಬೇಡಿಕೆ ಈಡೇರಿಕೆಗಾಗಿ ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳು ಸೆ. 28ರಿಂದ 3 ದಿನ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.
ಸೆ. 26 ಮತ್ತು 27 ಕ್ರಮವಾಗಿ ಶನಿವಾರ ಮತ್ತು ರವಿವಾರ ಆಗಿರುವುದರಿಂದ, ಸತತ ಐದು ದಿನಗಳವರೆಗೆ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದು. ಒಂದು ವೇಳೆ ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ಅ. 26ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿವೆ.
ಗ್ರಾಹಕರು ಮುಷ್ಕರದ ಅವಧಿಗೆ ಮುಂಚಿತವಾಗಿ ಶಾಖೆಗೆ ಸಂಬಂಧಿಸಿದ ಅಗತ್ಯ ವಹಿವಾಟುಗಳನ್ನು ಪೂರ್ಣಗೊಳಿಸಲು ಮತ್ತು ಪ್ರಸ್ತಾವಿತ ಮುಷ್ಕರದ ಸಮಯದಲ್ಲಿ ದಿನನಿತ್ಯದ ಆವಶ್ಯಕತೆಗಳಿಗಾಗಿ ಡಿಜಿಟಲ್ ಮತ್ತು ಪರ್ಯಾಯ ಬ್ಯಾಂಕಿಗ್ ಮಾರ್ಗಗಳನ್ನು ಬಳಸಲು ಸರಕಾರ ನೀಡಿದೆ













