ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬುಕಿಂಗ್ ಸಂದರ್ಭದಲ್ಲಿ ಪೂರ್ತಿ ಹಣ ಇಲ್ಲದ ಗ್ರಾಹಕರಿಗೆ ಭಾರತ್ ಗ್ಯಾಸ್ ಕಡೆಯಿಂದ ಸಿಹಿ ಸುದ್ದಿ ಕೊಟ್ಟಿದೆ. ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮರುಪೂರಣ ಮಾಡಲು ಬಡ್ಡಿ ರಹಿತ ಸಾಲ ಸೌಲಭ್ಯ ನೀಡುವುದಾಗಿ ಘೋಷಣೆಮಾಡಿದೆ.
ಇದರ ಬಗ್ಗೆ ಟ್ವೀಟ್ ಮಾಡಿರುವ ಭಾರತ್ ಗ್ಯಾಸ್, ಸಿಲಿಂಡರ್ ಮರುಪೂರಣ ಮಾಡಲು ಬಡ್ಡಿರಹಿತ ಮೈಕ್ರೋ-ಸಾಲ ಸೌಲಭ್ಯವನ್ನು ಘೋಷಣೆಮಾಡಿದೆ. ಈ ಸೌಲಭ್ಯದ ಮೂಲಕ ಗ್ರಾಹಕರು ಎಲ್ಪಿಜಿ ಮರುಪೂರಣಕ್ಕೆ 600 ರೂ ವರೆಗೆ ಬಡ್ಡಿರಹಿತ ಸಾಲ ಪಡೆಯಬಹುದು. ಈ 600ರೂ ಸಾಲಕ್ಕೆ ಪ್ರತಿ ವಾರವೂ ರೂ. 100 ರಂತೆ ಕಂತುಗಳಲ್ಲಿ ಹಣವನ್ನು ಕಟ್ಟಬೇಕಾಗುತ್ತದೆ. ಈ ಸಾಲದ ಮೇಲೆ ಯಾವುದೇ ಬಡ್ಡಿ ಇರುವುದಿಲ್ಲ ಎಂದು ಹೇಳಿದ್ದಾರೆ.













