ಕೃಷ್ಣಮೃಗ ಹತ್ಯೆ ಮಾಡಿದ ಸಲ್ಮಾನ್‌ ಖಾನ್‌ ಕುಟುಂಬವನ್ನೇ ನಾಶಪಡಿಸುತ್ತೇವೆ!‌ ಬಿಷ್ಣೋಯಿ ಗ್ಯಾಂಗ್‌ಗೆ ಸಲ್ಮಾನ್‌ ಖಾನ್‌ ಮೇಲೆ ಯಾಕಿಷ್ಟು ಕೋಪ ಗೊತ್ತಾ?!

ಸಲ್ಮಾನ್‌ ನಂಟಿನ ಕಾರಣಕ್ಕೆ ನಟ ಟೈಗರ್ ಶ್ರಾಫ್‌ ಮೇಲೆ ಗುಂಡಿನ ದಾಳಿ ನಡೆಸಿದ್ದ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಇದೀಗ ನಟ ಸಲ್ಮಾನ್‌ಗೆ ಮತ್ತೆ ಬೆದರಿಕೆ ಹಾಕಿದ್ದು, ‘ಸಲ್ಮಾನ್ ಕೂಡಲೇ ಕ್ಷಮೆಯಾಚಿಸಿ, ಇಲ್ಲದಿದ್ರೆ ನಿಮ್ಮ ಕುಟುಂಬವನ್ನೇ ನಾಶ ಪಡಿಸುತ್ತೇವೆ’ ಎಂದು ಬೆದರಿಕೆ ಹಾಕಿದೆ.

Advertisement

ಗ್ಯಾಂಗ್‌ನ ಪ್ರಮುಖ ನಾಯಕ ಅನಿಲ್ ಪಂಡಿತ್‌ ಈ ಬಗ್ಗೆ ಆಡಿಯೋದಲ್ಲಿ ಮಾತನಾಡಿದ್ದು ಮುಂಬೈ ಪೊಲೀಸರು ಇದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಆತ ‘ಸಲ್ಮಾನ್ ನನ್ನ ಮಾತನ್ನು ಎಚ್ಚರಿಕೆಯಿಂದ ಆಲಿಸಿ. ನೀವು ನನ್ನ ಅಣ್ಣ ಲಾರೆನ್ಸ್ ಬಿಷ್ಣೋಯಿ ಅಥವಾ ಬಿಷ್ಣೋಯಿ ಸಮುದಾಯಕ್ಕೆ ಕ್ಷಮೆಯಾಚಿಸದಿದ್ದರೆ, ನಾವು ನಿಮ್ಮ ಮನೆಯಲ್ಲಿ ನಾಯಿಯನ್ನು ಸಹ ಬಿಡುವುದಿಲ್ಲ. ನಿಮ್ಮ ಇಡೀ ಕುಟುಂಬವನ್ನು ನಾವು ನಾಶಪಡಿಸುತ್ತೇವೆ. ನೀವು ಸುರಕ್ಷಿತರಾಗಿದ್ದೀರಿ ಮತ್ತು ನಿಮಗೆ ಏನೂ ಆಗುವುದಿಲ್ಲ ಎಂದು ಭಾವಿಸಬೇಡಿ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಮತ್ತೊಂದು ಆಡಿಯೋದಲ್ಲಿ ಅನಿಲ್‌, ಸಲ್ಮಾನ್‌ಗೆ ಜೀವನ ನರಕ ಮಾಡುವ ಬೆದರಿಕೆ ಹಾಕಿದ್ದಾನೆ. ‘ನಮ್ಮ ಬಳಿ 70,000 ಶೂಟರ್‌ಗಳಿದ್ದಾರೆ. ನೀವು ಇಬ್ಬರನ್ನೂ ಕೊಂದರೂ ನಮ್ಮ ಬಳಿ 200 ಮಂದಿ ಸಿದ್ಧರಿದ್ದಾರೆ. ಮುಂಬೈನಲ್ಲಿ ನಮಗೆ ಹಲವಾರು ಸಹಚರರಿದ್ದಾರೆ. ಸಲ್ಮಾನ್‌ ಖಾನ್‌ ಕ್ಷಮೆಯಾಚಿಸುವವರೆಗೂ ಅವರನ್ನು ಬಿಡುವುದಿಲ್ಲ. ಅವರು ನಿರಾಕರಿಸಿದರೆ ಅವರಿಗೆ ಹತ್ತಿರವಿರುವ ಜನರನ್ನು ಗುರಿಯಾಗಿಸಿಕೊಳ್ಳುತ್ತೇವೆ. ಅವರ ಜೀವನ ನರಕ ನರಕ ಮಾಡುತ್ತೇವೆ’ ಎಂದು ಧಮ್ಕಿ ಹಾಕಿದ್ದಾರೆ.

Advertisement
Advertisement

1998ರಲ್ಲಿ ಚಿತ್ರೀಕರಣವೊಂದರ ವೇಳೆ ಕೃಷ್ಣಮೃಗವನ್ನು ಹತ್ಯೆಗೈದ ಆರೋಪ ಸಲ್ಮಾನ್‌ ಮೇಲಿದೆ. ಬಿಷ್ಣೋಯಿ ಸಮುದಾಯ ಕೃಷ್ಣಮೃಗಗಳನ್ನು ದೇವತೆಗಳೆಂದು ಪೂಜಿಸುತ್ತಾರೆ. ಹೀಗಾಗಿ ಘಟನೆ ಸಂಬಂಧ ಸಲ್ಮಾನ್‌ ಕ್ಷಮೆ ಕೇಳಬೇಕೆಂದು ಬಿಷ್ಣೋಯಿ ಸಮುದಾಯದ ಆಗ್ರಹ ಎಂದು ವರದಿ ಹೇಳಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page