ಮರಳಿ ಗೂಡು ಸೇರುವ ತವಕಕ್ಕೆ ತಣ್ಣೀರು!! ಬಿಜೆಪಿ ಘರ್‌ವಾಪ್ಸಿ ಪ್ರಕ್ರಿಯಿಗೆ ಇನ್ನೂ ಸಿಕ್ಕಿಲ್ಲ ಒಪ್ಪಿಗೆ!!

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ನಾಯಕರ ʼಘರ್‌ವಾಪ್ಸಿʼ ಪ್ರಕ್ರಿಯೆಗೆ ಬಿಜೆಪಿ ವರಿಷ್ಟರಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ಮರಳಿ ಗೂಡು ಸೇರುವುದಕ್ಕೆ ಉತ್ಸುಕರಾಗಿದ್ದವರಿಗೆ ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ ಎನ್ನಲಾಗಿದೆ.

Advertisement

ವರಿಷ್ಠರ ವಿರುದ್ಧವೇ ಬಂಡಾಯ ಎದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಎಸ್. ಈಶ್ವರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹಿತ ಅನ್ಯ ಪಕ್ಷದಲ್ಲಿ ತಾತ್ಕಾಲಿಕವಾಗಿ ನೆಲೆ ಕಂಡುಕೊಂಡವರನ್ನೂ ಪಕ್ಷಕ್ಕೆ ಮರಳಿ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಚರ್ಚೆ ಈಗ ಬಿಜೆಪಿಯಲ್ಲಿ ತೀವ್ರವಾಗಿದೆ.

Advertisement
Advertisement

ಆದರೆ ವರಿಷ್ಠರ ಹಂತದಲ್ಲಿ ಇದರ ಸಾಧಕ-ಬಾಧಕಗಳ ಬಗ್ಗೆ ಇನ್ನೂ ಚರ್ಚೆಯೇ ನಡೆದಿಲ್ಲ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಸ್ಥಳೀಯ ಕಾರಣಗಳಿಗಾಗಿ ಬಿಜೆಪಿ ಟಿಕೆಟ್‌ ಸಿಗದೇ ಕಾಂಗ್ರೆಸ್‌ಗೆ ಹೋಗಿ ಶಾಸಕರಾದವರು, ಬಿಜೆಪಿಯಿಂದ ಗೆದ್ದು ಕಾಂಗ್ರೆಸ್‌ ಜತೆ ಗುರುತಿಸಿಕೊಂಡವರು ಸಹಿತ ಅನೇಕರಿಗೆ ಮರಳಿ ಪಕ್ಷದ ಬಾಗಿಲು ತೆರೆಯಬೇಕೆಂಬ ಬಗ್ಗೆ ಒಂದು ವರ್ಗ ಸಲಹೆ ನೀಡಿದೆ. ಆದರೆ ಎಲ್ಲರನ್ನೂ ಸೇರಿಸಿಕೊಳ್ಳಲು ಸ್ಥಳಿಯ ಹಾಗೂ ರಾಜ್ಯಮಟ್ಟದಲ್ಲಿ ತೊಡಕುಗಳಿವೆ. ಇವೆಲ್ಲವೂ ನಿವಾರಣೆಯಾದ ಬಳಿಕ ಎಪ್ರಿಲ್‌ ಹೊತ್ತಿಗೆ ನೀಡುವ ಸಾಧ್ಯತೆ ಇದೆ. ಇತ್ತೀಚೆಗೆ ಧಾರವಾಡ ಜಿಲ್ಲೆಗೂ ಛಬ್ಬಿಯಲ್ಲಿ ವಿಜಯೇಂದ್ರ-ಯತ್ನಾಳ್‌ ಮುಖಾಮುಖಿ ಬಳಿಕ ಈ ಚರ್ಚೆಗೆ ಹೆಚ್ಚು ತೀವ್ರತೆ ಬಂದಿದೆ ಎಂದು ಪತ್ರಿಕಾ ಮೂಲಗಳು ವರದಿ ಮಾಡಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page