ರಾಷ್ಟ್ರೀಯ 17 ರಾಜ್ಯಗಳ ಬಿಜೆಪಿ ಉಸ್ತುವಾರಿಗಳ ಬದಲಾವಣೆ; ನೇಮಕ ಪಟ್ಟಿ ಬಿಡುಗಡೆ

ಹೊಸದಿಲ್ಲಿ: ಬಿಜೆಪಿ ಸಂಘಟನಾತ್ಮಕ ಪುನಾರಚನೆಯ ಭಾಗವಾಗಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೂತನ ಪ್ರಭಾರಿ ಹಾಗೂ ಸಹ-ಪ್ರಭಾರಿಗಳನ್ನು ನೇಮಕ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನವೀನ್ ಅವರು ಈ ನೇಮಕಾತಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

Advertisement

ಕರ್ನಾಟಕ ಬಿಜೆಪಿ ಪ್ರಭಾರಿಯಾಗಿ ಹಿರಿಯ ನಾಯಕ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ್ ದ್ವಿವೇದಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಜತೆಗೆ ಇವರಿಗೆ ಬಿಹಾರ ರಾಜ್ಯದ ಉಸ್ತುವಾರಿಯನ್ನೂ ನೀಡಲಾಗಿದೆ. ಸಹ-ಪ್ರಭಾರಿಯಾಗಿ ಡಾ. ಕಸಮ್ ವೆಂಕಟೇಶ್ವರಲು ಅವರನ್ನು ನೇಮಿಸಲಾಗಿದೆ. ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ಕರ್ನಾಟಕಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕತ್ವವು ಹೊಸ ಮುಖಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ.
ಈ ಹಿಂದೆ ಉಸ್ತುವಾರಿಯಾಗಿ ರಾಧ ಮೋಹನ್ ದಾಸ್‌ ಅಗರ್ವಾಲ್, ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಇದ್ದರು. ರಾಜ್ಯದಲ್ಲಿ ಮುಂಬರುವ ರಾಜಕೀಯ ಸವಾಲುಗಳು, ಸಂಘಟನಾ ಬಲವರ್ಧನೆ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ಮುನ್ನಡೆಸುವ ದೃಷ್ಟಿಯಿಂದ ಈ ಹೊಸ ನೇಮಕಾತಿ ಮಹತ್ವ ಪಡೆದುಕೊಂಡಿದೆ.

Advertisement
Advertisement

ಮಾಜಿ ಕೇಂದ್ರ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅವರಿಗೆ ಛತ್ತೀಸ್‌ಗಢ ಮತ್ತು ಹರಿಯಾಣ ಈ ಎರಡೂ ರಾಜ್ಯಗಳ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಗೆ ಡಾ. ವಿನಯ್ ಸಹಸ್ರಬುದ್ಧೆ ಪ್ರಭಾರಿಯಾಗಿ ನೇಮಕಗೊಂಡಿದ್ದು, ಮಾಜಿ ಸಂಸದ ಜಾಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಸಹ-ಪ್ರಭಾರಿಯಾಗಿದ್ದಾರೆ. ಗುಜರಾತ್‌ಗೆ ತರುಣ್ ಚುಗ್, ಗೋವಾಕ್ಕೆ ಡಾ. ಭಾರತಿ ಪ್ರವೀಣ್ ಪವಾರ್, ಅಸ್ಸಾಂಗೆ ಮಂಗಲ್ ಪಾಂಡೆ ಹಾಗೂ ಹಿಮಾಚಲ ಪ್ರದೇಶಕ್ಕೆ ಶ್ರೀಕಾಂತ್ ಶರ್ಮಾ ಅವರನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page