ಗೂನಡ್ಕದಲ್ಲಿ ಲಾರಿ-ಕಾರು ಮುಖಾಮುಖಿ ಡಿಕ್ಕಿ! ಸ್ಥಳದಲ್ಲೇ 13 ವರ್ಷದ ಬಾಲಕ ಸಾವು! ಇಬ್ಬರಿಗೆ ಗಂಭೀರ ಗಾಯ!!

ಸುಳ್ಯ : ಗೂನಡ್ಕ ಶಾಲೆಯ ತಿರುವು ಬಳಿ ಲಾರಿ ಮತ್ತು ಕಾರು ಪರಸ್ಪರ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಸುಮಾರು 13 ವರ್ಷದ ಬಾಲಕ ಮೃತಪಟ್ಟಿದ್ದು, ಕಾರಿನಲ್ಲಿದ್ದ ಮೂರಕ್ಕೂ ಹೆಚ್ಚು ಮಂದಿ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಇದೀಗ ವರದಿಯಾಗಿದೆ.

Advertisement

ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಕಾರು ಮತ್ತು ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಲಾರಿ ಪರಸ್ಪರ ಡಿಕ್ಕಿ ಆಗಿ ಕಾರಿನಲ್ಲಿದ್ದ ಓರ್ವ ಬಾಲಕ ಮೃತಪಟ್ಟಿದ್ದು ಮತ್ತಿಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.

Advertisement
Advertisement

ಕಾರಿನಲ್ಲಿದ್ದವರು ಬಂಟ್ವಾಳದ ಪುಣಚ ನಿವಾಸಿಗಳೆಂಬ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನಮಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page