ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬನ್ನೂರು ಸಮೀಪದ ಆನೆಮಜಲು ಎಂಬಲ್ಲಿ ನೂತನ ನ್ಯಾಯಾಲಯ ಸಂಕೀರ್ಣದ ಕಂಪೌಂಡ್ ಇಂದು ಸುರಿದ ಚಿಕ್ಕ ಮಳೆಗೆ ಧರೆಗೆ ಉರುಳಿದೆ.
ಜನವರಿಯಲ್ಲಿ ಉದ್ಘಾಟನೆಗೊಂಡಿದ್ದ ಕೋರ್ಟ್ ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಇದರ ಕಂಪೌಂಡ್ ಅರ್ಧ ಗಂಟೆ ಸುರಿದ ಸಾಧಾರಣ ಮಳೆಗೆ ಬಿದ್ದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಕಂಪೌಂಡ್ ಗುಣಮಟ್ಟವೇ ಹೀಗಿದ್ದರೆ ಇನ್ನು ಕೋರ್ಟ್ ಕಟ್ಟಡ ಎಷ್ಟು ವರ್ಷ ಬಾಳಿಕೆ ಬರಬಹುದು ಎಂಬ ಪ್ರಶ್ನೆ ಜನರಲ್ಲಿ ಮೂಡುವಂತಾಗಿದೆ. ಸದ್ಯ ಯಾರಿಗೂ ಹಾನಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.













