ಅತ್ತಿಗೆ ಜೊತೆ ಮುನಿಸಿಕೊಂಡ ಧನ್ವೀರ್!!‌ ವಿಜಯಲಕ್ಷ್ಮಿ ವಿರುದ್ಧ ಠಾಣೆ ಮೆಟ್ಟಿಲೇರಿದ ತಿಮ್ಮೇಗೌಡ!!

ಬೆಂಗಳೂರು: ಕಳೆದ ಕೆಲ ದಿನಗಳಿಂದ ಚಂದನವನದ ಅಂಗಳದಲ್ಲಿ ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವೆ ಉಂಟಾಗಿರುವ ವಿವಾದ ಹಲವು ರೀತಿಯಲ್ಲಿ ಸುದ್ದಿ ಹರಿದಾಡುತ್ತಿದೆ. ಇಬ್ಬರ ನಡುವಿನ ಮನಸ್ತಾಪ ಪೊಲೀಸ್ ಠಾಣಾ ಮೆಟ್ಟಿಲೇರಿದೆ. ದೂರು – ಪ್ರತಿದೂರು ದಾಖಲಾಗಿದೆ. ಬೆದರಿಕೆಯ ಆಡಿಯೋ ಸೇರಿದಂತೆ ವಿವಿಧ ವಿಚಾರಗಳ ಜೋರಾಗಿ ಚರ್ಚೆ ನಡೆಯುತ್ತಿದೆ ಎಂದು ಮೂಲಗೂ ವರದಿ ಮಾಡಿವೆ.

Advertisement

ದರ್ಶನ್ ಅವರಿಗೆ ಆಪ್ತರಾಗಿರುವ ಧನ್ವೀರ್ ವಿಜಯಲಕ್ಷ್ಮಿ ಅವರನ್ನು ತುಂಬಾನೇ ಗೌರವ ನೀಡುತ್ತಾರೆ. ಆದರೆ ಈಗ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ದರ್ಶನ್ ಅವರ ಆಪ್ತಸಹಾಯಕ (ಪಿಎ) ನಾಗರಾಜ್ ಅವರು ನಟ ಧನ್ವೀರ್ ಗೌಡ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್.ಆರ್. ನಗರ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟ ಧನ್ವೀರ್ ಗೌಡ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ನಾಗರಾಜ್ ದೂರು ನೀಡಿದ್ದಾರೆ.

Advertisement
Advertisement

ಇದಕ್ಕೆ ಪ್ರತಿಯಾಗಿ, ವಿಜಯಲಕ್ಷ್ಮಿ ಮತ್ತು ನಾಗರಾಜ್ ರೌಡಿಗಳೊಂದಿಗೆ ಮನೆಗೆ ಬಂದು ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಧನ್ವೀರ್ ತಂದೆ ತಿಮ್ಮೇಗೌಡ ಪ್ರತಿ ದೂರು ದಾಖಲಿಸಿದ್ದಾರೆ. ಈ ಎಲ್ಲದಕ್ಕೂ ಕಾರಣವೇನು ಎನ್ನುವುದು ಈಗ ಗೊತ್ತಾಗಿದೆ. ಮೂಲಗಳ ಪ್ರಕಾರ, ದರ್ಶನ್ ಅವರನ್ನು ಜೈಲಿನಿಂದ ಹೊರತರಬೇಕು ಎಂಬ ಕಾನೂನಿನ ಹೋರಾಟಕ್ಕೆ ಸಾಕಷ್ಟು ಹಣ ಖರ್ಚಾಗುತ್ತಿದೆ. ಅದೇ ಹಣಕಾಸಿನ ಕಾರಣದಿಂದಲೇ ವಿಜಯಲಕ್ಷ್ಮಿ ಹಾಗೂ ಧನ್ವೀರ್ ಅವರ ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಯಾಗಿದೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ದರ್ಶನ್ ಅಭಿಮಾನಿಗಳು ಧನ್ವೀರ್ ವಿರುದ್ಧ ಸಾಂಗ್ ಹಾಕಿ ಟಾಂಗ್ ಕೊಟ್ಟಿದ್ದು, ಧನ್ವೀರ್ ಕೂಡ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page