ಬೆಳ್ತಂಗಡಿ: ವಿಶೇಷ ತನಿಖಾದಳದ ಇಬ್ಬರು ಅಧಿಕಾರಿಗಳಾದ ನಿಶಾ ಜೇಮ್ಸ್ ಐಪಿಎಸ್ ಮತ್ತು ಲೋಕೇಶ್ ಜಗಲಸಾರ್ ಐಪಿಎಸ್ ಅವರು ಕಾಲೇಜು ವಿದ್ಯಾರ್ಥಿನಿ ಕು. ಸೌಜನ್ಯ ಕೊಲೆ ಪ್ರಕರಣ ಸಂಬಂಧ ತನಿಖೆಗಾಗಿ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಅ.1 ರಂದು ಬೆಳಗ್ಗೆ 8 ಗಂಟೆಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೋಬ್ಬ ಎಸ್ಐಟಿ ಅಧಿಕಾರಿಯಾದ ಮಂಗಳೂರು ನಗರ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿಯವರನ್ನು ಕಮೀಷನರ್ ಕಚೇರಿಯಲ್ಲಿ ಬೆಳಗ್ಗೆ 10:30 ಕ್ಕೆ ಭೇಟಿಯಾಗಿ ಸೌಜನ್ಯ ಪ್ರಕರಣದ ಬಗ್ಗೆ ಚರ್ಚಿಸಿ ತನಿಖೆ ಮೂಂದುವರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.













