ಬೆಳ್ತಂಗಡಿ : ಕುಮಾರಿ ಸೌಜನ್ಯಳ ಜನ್ಮದಿನದ ಸಂದರ್ಭದಲ್ಲಿ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಶಿಲಾಮಯ ಸಮಾಧಿ ಮಂಟಪವೊಂದನ್ನು ನಿರ್ಮಿಸಲಾಗಿದೆ..
ಕೇವಲ 17ನೇ ವಯಸ್ಸಿನಲ್ಲಿ ಅವಳು ನಮ್ಮಿಂದ ದೂರವಾಗಿದ್ದರೂ, ಅವಳ ನೆನಪು, ಅವಳ ಹೆಸರು ಮತ್ತು ನ್ಯಾಯಕ್ಕಾಗಿ ನಡೆದ ಹೋರಾಟವು ಲಕ್ಷಾಂತರ ಜನರ ಹೃದಯದಲ್ಲಿ ಇಂದಿಗೂ ಜೀವಂತವಾಗಿದೆ. ಈ ಪವಿತ್ರ ಸ್ಮಾರಕವು ನೆನಪಿನ ಸಂಕೇತವಾಗಿಯೂ, ನಂಬಿಕೆಯ ಪ್ರತೀಕವಾಗಿಯೂ ಹಾಗೂ ನ್ಯಾಯ ದೊರಕಿಸಿಕೊಡುವ ನಮ್ಮ ದೃಢ ಸಂಕಲ್ಪದ ಸಂಕೇತವಾಗಿಯೂ ನಿಂತಿದೆ ಎಂದು ಸೌಜನ್ಯಾ ಪರ ಹೋರಾಟಗಾರರು ತಿಳಿಸಿದ್ದಾರೆ.
ಸೌಜನ್ಯ ನಮ್ಮ ಹೃದಯಗಳಲ್ಲಿ ಸದಾ ಜೀವಂತವಾಗಿದ್ದಾಳೆ. ನ್ಯಾಯಕ್ಕಾಗಿ ಅವಳು ನಡೆಸಿದ ಹೋರಾಟವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ; ಅಷ್ಟೇ ಅಲ್ಲ, ಅಪರಾಧಿಗಳಿಗೆ ಶಿಕ್ಷೆಯಾಗುವವರೆಗೂ ನಾವು ಸುಮ್ಮನಿರುವುದಿಲ್ಲ ಎಂಬ ಘೋಷವಾಕ್ಯದೊಂದಿಗೆ ಈ ಸಮಾಧಿ ಮಂಟಪ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ.













