ಧರ್ಮಸ್ಥಳ ಯೋಜನೆಯಲ್ಲಿ ಸೇವೆ ಸಲ್ಲಿಸಿದವರ ಮತ್ತು ನಿವೃತ್ತರಾದವರ ಕಾರ್ಯಾಗಾರ!

ಉಜಿರೆ : ಧರ್ಮಸ್ಥಳ ಯೋಜನೆಯಲ್ಲಿ ಸೇವೆ ಸಲ್ಲಿಸಿದವರ ಮತ್ತು ನಿವೃತ್ತರಾದವರ ಕಾರ್ಯಾಗಾರ ಉಜಿರೆಯ ಓಷ್ಯನ್ ಪರ್ಲ್‌ ಸಭಾಂಗಣದಲ್ಲಿ ನಡೆಯಿತು.

Advertisement

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತಾಡಿದ ಹಿರಿಯ ಕಾರ್ಯಕರ್ತ ಬಿ.ಜಯಂತ ಶೆಟ್ಟಿ, ನಾವೆಲ್ಲರೂ ಒಟ್ಟಾಗಿ ಬೆಳೆದವರು, ಸಂತೊಷದಿಂದ ಸಮಾಜಕ್ಕೆ ಉತ್ತಮ ಸೇವೆ ನೀಡಿದವರು. ಅದರಿಂದಾಗಿ ಇಂದಿಗೂ ನಮ್ಮನ್ನು ಧರ್ಮಸ್ಥಳದವರೆಂದು ಜನ ಗುರುತಿಸುತ್ತಾರೆ. ಧರ್ಮಸ್ಥಳ ನಮಗೆ ಉತ್ತಮ ಜೀವನ ರೂಪಿಸಿದೆ. ಆದುದರಿಂದ ಶ್ರೀ ಧರ್ಮಸ್ಥಳ ಬಗ್ಗೆ ಅಪಾರ ನಂಬಿಕೆಯೊಂದಿಗೆ ನಮ್ಮ ಮತ್ತು ಧರ್ಮಸ್ಥಳ ಸಂಭಂದ ಇನ್ನೂ ಗಟ್ಟಿಯಾಗಿರಬೆಕು. ಅದರೊಂದಿಗೆ ನಮ್ಮ ಸಂಘಟನೆ ಮತ್ತು ಹಿರಿಯರು ಕಿರಿಯರು ಎಂಬ ಭೇದ ಇಲ್ಲದೆ ಒಗ್ಗಟ್ತಾಗಿರಬೆಕು. ಮುಂದೆ ಉತ್ತಮ ಯೋಜನೆ, ಯೋಚನೆ ರೂಪಿಸುವುದೆ ನಮ್ಮೆಲ್ಲರ ಉದ್ದೇಶ ಆಗಿರಬೆಕು ಎಂದು ನುಡಿದರು.

Advertisement
Advertisement

ಇನ್ನು ಶ್ರೀಹರಿಯವರು ಮಾತಾಡಿ ನಮ್ಮ ಸಂಘಟನೆ ಸದ್ಯ ಉಡುಪಿ, ದ.ಕನ್ನಡಕ್ಕೆ ಸೀಮಿತವಾಗಿದ್ದು , ಹೆಚ್ಚು ಆರ್ಥಿಕ ಹೊರೆ ಆಗದಂತೆ ಮುಂದುವರಿಸಬೇಕೆಂದರು. ಜೊತೆಗೆ ಸೀತಾರಾಮ ಶೆಟ್ಟಿಯವರು ಮುಂದಿನ ಯೋಜನೆ ಹೇಗಿರಬೇಕು ಎಂದು ಸೂಚಿಸಿದ್ದರು.
ಎಲ್ಲಾ ಕಾರ್ಯಕರ್ತರಿಂದ ಬಂದ ಅಭಿಪ್ರಾಯದ ಕ್ರೋಡೀಕರಣವನ್ನು ಬಿ .ಜಯರಾಮ ನೆಲ್ಲಿತ್ತಾಯರು ಸಭೆ ಮುಂದೆ ಮಂಡಿಸಿದ್ದರು. ಈ ಸಂಧರ್ಭದಲ್ಲಿ ಉತ್ತಮ ಅಭಿಪ್ರಾಯ ನೀಡಿದ್ದ ಬೂದಪ್ಪ ಮತ್ತು ವಾರಿಜಾ ಅವರಿಗೆ ಬಹುಮಾನ ನೀಡಿ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮುಂದಿನ ಸಂಘಟನೆ ಮತ್ತು ಕಾರ್ಯಕ್ರಮ ರೂಪಣೆ ಸಿದ್ದತೆ ಬಗ್ಗೆ 22 ಮಂದಿಯ ಉಪಸಮಿತಿ ರಚಿಸಲಾಯಿತು. ಈ ಸಂದರ್ಭದಲ್ಲಿ ಯೋಜನೆಗೆ ದುಡಿದು ಇಹಲೋಕ ತ್ಯಜಿಸಿದವರನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ದ.ಕನ್ನಡ, ಉಡುಪಿ, ಕುಂದಾಪುರ ಮೊದಲಾದ ಕಡೆಯಿಂದ ಎಲ್ಲಾ ಹಿರಿಯ ಕಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮ ಮೊದಲು ಪ್ರಸ್ತಾಪನೆಯನ್ನು ಗಂಗಾಧರ ಭಂಡಾರಿ ಮಂಡಿಸಿದರು. ಸುರೇಶ ಸಾಲಿಯಾನ್ ಪ್ರಾರ್ಥಿಸಿ, ನಾಗೆಶ ಉಜಿರೆ ಸ್ವಾಗತಿಸಿದರು. ಉಮೆಶ ಜಿ.ಮ್ ಕಾರ್ಯಕ್ರಮ ನಿರೂಪಿಸಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page