ತರಳಬಾಳು ಮಠದಿಂದ ಮನುಕುಲಕ್ಕೆ ಸಿಗುತ್ತಿದೆ ಬೆಳಕು : ಡಿ.ಕೆ. ಶಿವಕುಮಾರ್‌ || ಮಠದ ಕಾರ್ಯವನ್ನು ಕೊಂಡಾಡಿದ ಮುಖ್ಯಮಂತ್ರಿ!!

ಸಿರಿಗೆರೆ: ತರಳಬಾಳು ಮಠದಿಂದ ಮನುಕುಲಕ್ಕೆ ಬೆಳಕು ಸಿಗುತ್ತಿದೆ. ಮಧ್ಯ ಕರ್ನಾಟಕದಲ್ಲಿ ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆ ಮಠವು ಕೆಲಸಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಸಿರಿಗೆರೆಯಲ್ಲಿ ತರಳಬಾಳು ಪೀಠದಿಂದ ಗುರುವಾರ ಆಯೋಜಿಸಿದ್ದ ಶಿವಕುಮಾರ ಶ್ರೀ ಗಳ 35ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಮಠವು ರೈತರಿಗೆ ನೀರು, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ, ಮಕ್ಕಳಿಗೆ ಶಿಕ್ಷಣ ನೀಡುವ ಮಹತ್ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ. ತರಳಬಾಳು ಮಠವು ಜಾತ್ಯತೀತ ತತ್ವಕ್ಕೆ ಬದ್ಧವಾಗಿ ಸಮಾಜದ ಎಲ್ಲ ವರ್ಗಗಳ ಜನರಿಗೂ ಸೇವೆ ಸಲ್ಲಿಸುತ್ತಿದೆ. ಸರ್ಕಾರದಿಂದ ಮಾಡಲಾಗದ ಕೆಲವು ಸಾಮಾಜಿಕ ಕಾರ್ಯಗಳನ್ನು ಮಠಗಳು ಮಾಡುತ್ತಿವೆ. ತರಳಬಾಳು ಮಠವು ಶ್ರೇಷ್ಠವಾದ ಸ್ಥಾನದಲ್ಲಿರುವುದನ್ನು ನಾನು ತಿಳಿದುಕೊಂಡಿದ್ದೇನೆ. 2028ರ ಡಿಸೆಂಬರ್ ಒಳಗೆ ಬಯಲು ಸೀಮೆ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಸರ್ಕಾರ ಬದ್ಧವಾಗಿದೆ. ಸರ್ಕಾರ ರೈತರ ನಿರೀಕ್ಷೆಗಳನ್ನು ಅರಿತು ಕೆಲಸ ಮಾಡುತ್ತಿದೆ. ಅನ್ನದಾತರ ಕಷ್ಟಗಳ ಅರಿವು ಸರ್ಕಾರಕ್ಕೆ ಇದೆ. ಅವರಿಗೆ ತಿಂಗಳ ಸಂಬಳ, ಪಿಂಚಣಿ, ಲಂಚ ಇಲ್ಲ. ಅವರ ಬದುಕು ಸಂಕಷ್ಟದಲ್ಲಿದೆ. ಕೃಷಿಯಲ್ಲಿ ಅವರು ತೊಡಗಿಸಿಕೊಳ್ಳಲು ಅನುವಾಗುವಂತೆ ನೀರಾವರಿಯೋ ಜನೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದ ವಿಧಾನಸಭೆಯ ಕಲಾಪಗಳಲ್ಲಿ ಡಿ.ಕೆ.ಶಿವಕುಮಾರ್ ಅವರ ಔಚಿತ್ಯಪೂರ್ಣ ನಡವಳಿಕೆ ಮೆಚ್ಚುಗೆಯಾಗಿದೆ. ಅಭಿವೃದ್ಧಿ ವಿಚಾರಕ್ಕೆ ಬಂದಾಗ ಎಲ್ಲಾ ಪಕ್ಷದವರೂ ಸಹ ಬಿಗುಮಾನ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಹೇಳಿದರು.

Advertisement
Advertisement

ತರಳಬಾಳು ಹುಣ್ಣಿಮೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಾಣೇ ಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಚಿವರಾದ ಬಸವಂತಪ್ಪ, ಚಲುವರಾಯಸ್ವಾಮಿ, ಕೆ.ಎಚ್.ಮುನಿಯಪ್ಪ, ಟಿ.ರಘುಮೂರ್ತಿ , ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಯು.ಬಿ.ಬಣಕಾರ, ಎಂ .ಚಂದ್ರಪ್ಪ, ಬಸವರಾಜು ಶಿವಗಂಗಾ, ಡಿ.ಜಿ.ಶಾಂತನಗೌಡ, ಎಚ್.ಡಿ.ತಮ್ಮಯ್ಯ, ಬಿ.ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಕೇಂದ್ರದ ಮಾಜಿ ಸಚಿವ ಜಿ.ಎಂ .ಸಿದ್ದೇಶ್ವರ, ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಇದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page