ಮಂಗಳೂರು: ಇದೇ ಮೊದಲ ಬಾರಿ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಬೆಳಗ್ಗೆ(ಸೆ.18) ಮಹಾತ್ಮಗಾಂಧಿ ಅವರು ಉಳಿದಿದ್ದ ಮನೆಗೆ ಭೇಟಿ ನೀಡಿದರು.
ಸರಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ “ಮಹಾತ್ಮ ಗಾಂಧಿ ಅವರು ಉಳಿದಿದ್ದ ಮನೆಗೆ ಹೋಗಿದ್ದೆ ಅಲ್ಲಿ ಉಪಾಹಾರ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತಾರೋ ಅಲ್ಲಿ ಹೋಗುತ್ತೇನೆ” ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಬನ್ಸ್, ದೋಸೆ ಎಲ್ಲಾ ಸವಿದೆ. ಇಲ್ಲಿಗೆ ಬಂದಿರುವುದು ಬಹಳ ಸಂತೋಷ ತಂದಿದೆ ಎಂದು ಸಿಎಂ ಹೇಳಿದರು.
ಯಾರೂ ಗಾಬರಿಯಾಗಬೇಕಿಲ್ಲ. ನಮಗೆ ಜನರ ಬದುಕು ಮುಖ್ಯ, ನಾವು ಜನರ ಬದುಕಿನ ಮೇಲೆ ರಾಜಕೀಯ ಮಾಡುವವರು. ಭಾವನೆಗಳ ಮೇಲೆ ರಾಜಕೀಯ ಮಾಡುವವರಲ್ಲ. ಎಲ್ಲರ ಚಿಂತನೆಯನ್ನೊಳಗೊಂಡು ನಮ್ಮ ಸರಕಾರ ಕೆಲಸ ಮಾಡಲಿದೆ ಎಂದು ಸಿಎಂ ಹೇಳಿದರು.
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿಎಂ ಭವ್ಯ ಸ್ವಾಗತಕ್ಕೆ ತಯಾರಿ ನಡೆಸಲಾಗಿದೆ. ಚೆಂಡೆ ಬ್ಯಾಂಡ್ ಸೆಟ್ ವಿವಿಧ ವೇಷಧಾರಿಗಳ ತಂಡಗಳು ಸಿದ್ದವಾಗಿ ಗಮನ ಸೆಳೆದೆವು. ಪಂಪ್ ವೆಲ್ ನಿಂದ ಪಡೀಲ್ ವರೆಗೆ ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಡಿಸಿ ಕಚೇರಿ ಮುಂದೆ ಸಾರ್ವಜನಿಕರು ಜಮಾಯಿಸಿದ್ದು, ಸಿಎಂ ನೋಡಲು ರಸ್ತೆ ಬದಿ ಕಾದು ನಿಂತಿದ್ದಾರೆ. ವ್ಯಾಪಕ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.













