ನಾಗಾಲ್ಯಾಂಡ್‌ನಲ್ಲಿ ನಕಲಿ ಮಧ್ಯ ಸೇವಿಸಿ 19 ಜನ ಮೃತ್ಯು! ಮದ್ಯ ನಿಷೇದ ಕಾನೂನು ಜಾರಿಯಲ್ಲಿದ್ದಾಗಲೇ ಘಟನೆ!!

ನಾಗಾಲ್ಯಾಂಡ್‌ : ಮದ್ಯ ನಿಷೇಧ ಕಾನೂನು ಜಾರಿಯಲ್ಲಿರುವ ನಾಗಾಲ್ಯಾಂಡ್‌ನ ಮೊಕಕಚಾಂಗ್‌ನಲ್ಲಿ ನಕಲಿ ಮದ್ಯ ಸೇವಿಸಿ 19 ಜನ ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳಲ್ಲಿ ಮೊಕಕಚಾಂಗ್ ಜಿಲ್ಲೆಯಲ್ಲಿ 8 ಜನ ಹಾಗೂ ಟ್ಯೂನ್ ಸಯಾಂಗ್‌ನಲ್ಲಿ 11 ಜನ ಕಲಬೆರಕೆ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಕಲಬೆರಕೆ ಮದ್ಯದ ಸರಬರಾಜು ಬಗ್ಗೆ ಪತ್ತೆ ಹಚ್ಚಲು ಡಿವೈ ಎಸ್‌ಪಿ ಐ ಬಂಗ್ಲಾಂಗ್ ಚಾಂಗ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಎಸ್‌ಪಿಐ ಬಂಗ್ಲಾಂಗ್ ಚಾಂಗ್‌ ಮಾಹಿತಿ ನೀಡಿದ್ದಾರೆ.

Advertisement


ನಕಲಿ ಮದ್ಯ ಸೇವನೆ ಸಾವಿಗೆ ಕಾರಣವಾಗಿದೆಯೇ ಎಂದು ತಿಳಿಯಲು ಮಾದರಿಗಳನ್ನು ಗುವಾಹಟಿಯ ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆ ಬಳಿಕ ನಕಲಿ ಮದ್ಯ ಜಾಲಗಳ ಮೇಲೆ ದಾಳಿ ನಡೆಸಿ 19 ಜನರನ್ನು ಬಂಧಿಸಲಾಗಿದೆ. ಸುಮಾರು 3 ಸಾವಿರಕ್ಕೂ ಅಧಿಕ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement
Advertisement

ಲೇಬಲ್ ಇಲ್ಲದ, ನಕಲಿ ಮದ್ಯ ಸೇವಿಸದಂತೆ ಹಾಗೂ ಮದ್ಯ ಸೇವಿಸಿದ ನಂತರ ತಲೆತಿರುಗುವಿಕೆ, ದೃಷ್ಟಿ ಮಂದವಾದರೆ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page