ಪುತ್ತೂರು: ಗ್ರಾಮೀಣ ಭಾಗದಲ್ಲಿ ಸುಂದರವಾದ ಒಂದು ಕ್ಯಾಂಪಸ್ ನಿರ್ಮಾಣ ಮಾಡಿರುವುದು ತುಂಬಾ ಕುತಿಯ ವಿಚಾರ. ನಿಮ್ಮ ಶಿಕ್ಷಣ ಸಂಸ್ಥೆಯಿಂದ ಇಂತಹ ಉನ್ನತ ಶಿಕ್ಷಣ ನೀಡುವ ಕೇಲಸ ಇದರಿಂದ ಆಗಬೇಕಿದೆ. ಆರೋಗ್ಯ, ಕ್ಷೇತ್ರದಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳ ಪಾತ್ರಗಳು ಒಂದೇ ಆಗಿದೆ. ನಿಮ್ಮ ಪ್ರಶ್ನೆಯಲ್ಲಿ ಡಿಸಿಪ್ಲೀನ್ ಅತೀ ಅಗತ್ಯ. ಎಲ್ಲೇ ಹೋಗಿ ಗೌರವಯುತವಾಗಿ ನಡೆಯುವ ಗುಣ ನಿಮ್ಮದಾಗಲಿ ನೀವು ಉತ್ತಮ ಮಾಡಿದಲ್ಲಿ ಎಲ್ಲರು ಗುರುತಿಸುತ್ತಾರೆ. ಎಲ್ಲಾ ಭಾಗದ ಜನರಿಗೆ ಇದೆ ಕೇಂದ್ರ ಸ್ಥಾನವಾಗಿದೆ. ಈ ಸಂಸ್ಥೆ ಸಮಾಜದ ಒಂದು ಅಸ್ತಿಯಾಗಬೇಕಿದೆ ಸಂಸ್ಥೆಗೆ ಸದಾ ನಮ್ಮಿಂದಾಗುವ ಸಹಕಾರವನ್ನು ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಆಲೈಡ್ ಮತ್ತು ಹೆಲ್ತ್ಕೇರ್ ಕೌನ್ಸಿಲ್ ನ ಅಧ್ಯಕ್ಷರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಯು.ಟಿ.ಇಫಿಕಾರ್ ಆಲಿರವರು ಹೇಳಿದರು.
ಅವರು ಪುತ್ತೂರಿನ ಕೊಟೇಚಾ ಸಭಾಂಗಣದಲ್ಲಿ ನಡೆದ ಪ್ರಗತಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವತಿಯಿಂದ ಪ್ರಗತಿ ಕಾಲೇಜ್ ಆಪ್ ನರ್ಸಿಂಗ್ ಸೈನ್ಸ್, ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಆಲ್ಡ್ ಹೆಲ್ತ್ ಸೈನ್, ಪ್ರಗತಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ನ ವಿದ್ಯಾರ್ಥಿಗಳಿಂದ ನಡೆದ ಫನ್ ಫೆಸ್ಟ್- 2026 ವಾರ್ಷಿಕ ವಾರ್ಷಿಕ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಟರಿ ಕ್ಲಬ್ ಪುತ್ತೂರಿನ ಅಧ್ಯಕ್ಷ ಎಂ. ದತ್ತಾತ್ರೇಯ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಹಾಸ್ಪಿಟಲ್ ಮತ್ತು ಎಜ್ಯುಕೇಷನ್ ಟ್ರಸ್ಟ್ನ ಡಾ. ಯು. ಶ್ರೀಪತಿ ರಾವ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಗತಿ ಹಾಸ್ಪಿಟಲ್ ಮತ್ತು ಎಜ್ಯುಕೇಷನ್ ಟ್ರಸ್ಟ್ನ ಡಾ. ಸುಧಾ ಎಸ್. ರಾವ್ ಉಪಸ್ಥಿತರಿದ್ದರು.













