ಪುತ್ತೂರಿನ ಶಿವಳ್ಳಿ ಸಂಪದಕ್ಕೆ ಬಂಗಾರದ ಹೊಳಪು! ನೂತನ ಗೌರವಾಧ್ಯಕ್ಷರಾಗಿ ಜಿ.ಎಲ್.‌ ಬಲರಾಮ ಆಚಾರ್ಯ

ಪುತ್ತೂರು: ಪುತ್ತೂರಿನ ಸ್ವರ್ಣೋದ್ಯಮಿ ದಿ| ಜಿ.ಎಲ್‌. ಆಚಾರ್ಯರ ಪುತ್ರ, ಈ ಭಾಗದ ಉದ್ಯಮಿ ಜಿ.ಎಲ್.‌ ಬಲರಾಮ ಆಚಾರ್ಯ ಅವರು ಶಿವಳ್ಳಿ ಸಂಪದ ಪುತ್ತೂರು ಮತ್ತು ಕಡಬ ತಾಲೂಕು ಇದರ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ಮಾತ್ರವಲ್ಲದೇ ಜಿ. ಎಲ್.‌ ಆಚಾರ್ಯ ಜ್ಯುವೆಲ್ಲರಿ ಸಂಸ್ಥೆಯ ಮೂಲಕ ಉದ್ಯಮ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿರುವ ಬಲರಾಮ ಆಚಾರ್ಯರ ಆಯ್ಕೆ ಮೂಲಕ ಪುತ್ತೂರು ಮತ್ತು ಕಡಬ ತಾಲೂಕು ಶಿವಳ್ಳಿ ಸಂಪದಕ್ಕೆ ವಿಶೇಷ ಬಲ ಸಿಕ್ಕಿದಂತಾಗಿದೆ.

Advertisement

ಈ ಸಂದರ್ಭದಲ್ಲಿ ತಾಲೂಕು ಶಿವಳ್ಳಿ ಸಂಪದದ ಅಧ್ಯಕ್ಷ ಸತೀಶ್‌ ಮುಡಂಬಡಿತಾಯ, ಕಾರ್ಯದರ್ಶಿ ಬಾಲಚಂದ್ರ ಮುಚ್ಚಿಂತ್ತಾಯ, ಸಂಘಟನಾ ಕಾರ್ಯದರ್ಶಿ ರವೀಂದ್ರ ಟಿ, ಕೋಶಾಧಿಕಾರಿ ಕೃಷ್ಣರಾಜ ಎರಕಡಿತಾಯ, ನಿಕಟ ಪೂರ್ವ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ, ಪೂರ್ವ ಅಧ್ಯಕ್ಷತೆ ಕೆ ಆರ್‌ ಆಚಾರ್ಯ, ಉಪಧ್ಯಕ್ಷ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ನೆಲ್ಯಾಡಿ ವಲಯದ ರವಿಪ್ರಸಾದ್‌ ಆಚಾರ್‌ ಮುಂತಾದವರು ಆಚಾರ್ಯರ ಕಛೇರಿಗೆ ತೆರಳಿ ಅಭಿನಂದಿಸಿದರು.
ಈ ಹಿಂದೆ ಪುತ್ತೂರು ಶಿವಳ್ಳಿ ಸಂಪದದ ಗೌರವಾಧ್ಯಕ್ಷರಾಗಿದ್ದ, ಹಿರಿಯ ವಕೀಲ ಹಾಗೂ ಸಾಮಾಜಿಕ ಮುಂದಾಳು ಎನ್‌ ಸುಬ್ರಹ್ಮಣ್ಯ ಕೊಳತ್ತಾಯರು ಇತ್ತೀಚೆಗೆ ನಿಧನರಾಗಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಇದೀಗ ಬಲರಾಮ ಆಚಾರ್ಯರ ಆಯ್ಕೆಯಾಗಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page