ಚಿನ್ನದ ಬೆಲೆಯಲ್ಲಿ ಏರಿಳಿತ ! ಮುಂದೇನು??

ಬೆಂಗಳೂರು : ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದರಿಂದ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸಲು ಮುಂದಾಗಿದ್ದ ಗ್ರಾಹಕರಿಗೆ ಕೊಂಚ ನಿರಾಳತೆ ಸಿಕ್ಕಿತ್ತು. ಆದರೆ ಶನಿವಾರದ ಬೆಳಗಿನ ವಹಿವಾಟಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಅಲ್ಪ ಏರಿಕೆ ದಾಖಲಾಗಿದೆ. ಹಬ್ಬದ ಸಮಯದಲ್ಲೇ ಸ್ವರ್ಣದ ಬೆಲೆ ಮತ್ತೆ ಏರಿಕೆಯತ್ತ ಮುಖ ಮಾಡಿರುವುದು ಖರೀದಿದಾರರಲ್ಲಿ ಗೊಂದಲ ಮೂಡಿದೆ.

Advertisement

ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಬಂಗಾರದ ಬೆಲೆ ವಿವರ:

Advertisement
Advertisement

ಬೆಂಗಳೂರಿನ ಮಾರುಕಟ್ಟೆಯಲ್ಲಿ ಶನಿವಾರ ಬೆಳಗಿನ ವಹಿವಾಟಿನಲ್ಲಿ ಎಲ್ಲಾ ಕ್ಯಾರೆಟ್‌ನ ಚಿನ್ನದ ದರದಲ್ಲೂ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ:

24 ಕ್ಯಾರೆಟ್ ಶುದ್ಧ ಚಿನ್ನ: ಶುಕ್ರವಾರದ ಸಂಜೆಯ ದರಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ ₹16ರಷ್ಟು ಏರಿಕೆಯಾಗಿದೆ. ಇದರೊಂದಿಗೆ 1 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ₹15,458 ಕ್ಕೆ ತಲುಪಿದ್ದರೆ, 10 ಗ್ರಾಂ ಚಿನ್ನದ ಬೆಲೆ ₹1,54,580 ಕ್ಕೆ ತಲುಪಿದೆ.

22 ಕ್ಯಾರೆಟ್ ಆಭರಣ ಚಿನ್ನ: ಆಭರಣ ಚಿನ್ನದ ದರ ಪ್ರತಿ ಗ್ರಾಂಗೆ ₹15ರಷ್ಟು ಹೆಚ್ಚಾಗಿದೆ. 1 ಗ್ರಾಂಗೆ ₹14,170 ಹಾಗೂ 10 ಗ್ರಾಂಗೆ ₹1,41,700 ಆಗಿದೆ.

18 ಕ್ಯಾರೆಟ್ ಚಿನ್ನ: 18 ಕ್ಯಾರೆಟ್‌ ಚಿನ್ನದ ದರ ಪ್ರತಿ ಗ್ರಾಂಗೆ ₹12ರಷ್ಟು ಹೆಚ್ಚಾಗಿದ್ದು, 1 ಗ್ರಾಂಗೆ ₹11,594 ಹಾಗೂ 10 ಗ್ರಾಂಗೆ ₹1,15,940 ಕ್ಕೆ ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page