ತಮಿಳುನಾಡಿನಲ್ಲಿ ʼತಾಯಿಮಾಮನ್ ತಂಗ ಮೋತಿರಂ ತಿಟ್ಟಂʼ ಸರಕಾರದ ಯೋಜನೆಯಡಿ ತನ್ನ ನವಜಾತ ಶಿಶುವಿಗೆ ಸಿಗಬೇಕಿದ್ದ ಚಿನ್ನದ ಉಂಗುರ ಸಿಗುವುದು ತಡವಾಗಿದೆ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಕೋಪಗೊಂಡು, ಸರಕಾರಿ ನರ್ಸ್ ಹಾಗೂ ಅವರ ಕುಟುಂಬದ ಇಬ್ಬರು ಸದಸ್ಯರ ಮೇಲೆ ಸಲಾಕೆಯಿಂದ ಹಲ್ಲೆ ನಡೆಸಿರುವ ಈ ಘಟನೆ ತಂಜಾವೂರು ಜಿಲ್ಲೆಯಲ್ಲಿ ನಡೆದಿದೆ. ಮಧನ್ ಎಂಬಾತನ ಪತ್ನಿಗೆ ಇತ್ತೀಚೆಗೆ ಸರಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮದನ್ ನರ್ಸ್ ಅಲಮೇಲು ಎಂಬವರ ಬಳಿ ಆ ಮಗುವಿಗೆ ಕೂಡಲೇ ಉಂಗುರ ಬೇಕೆಂದು ಪಟ್ಟುಹಿಡಿದಿದ್ದ.
ಆದರೆ ಹಂತಹಂತವಾಗಿ ಕೊಡುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಇದಕ್ಕೆ ಕೊಪಿತಗೊಂಡು ಅವರ ಮೇಲೆ ಆ ವ್ಯಕ್ತಿ ಹಲ್ಲೆ ಮಾಡಿದ್ದು, ಪೊಲೀಸರು ತಿನಿಖೆ ಪ್ರಾರಂಭಿಸಿದ್ದಾರೆ.
ನನಗೆ ಹೆಣ್ಣು ಮಗು ಆಗಿದೆ! ಚಿನ್ನದುಂಗುರ ಈಗಲೇ ಕೊಡಿ!! ತಮಿಳುನಾಡಿನಲ್ಲಿ ಉಂಗುರ ಕದನ!!
Share this article
Subscribe
By pressing the Subscribe button, you confirm that you have read our Privacy Policy.













