ಪುತ್ತೂರು : ಕಳೆದ ಹಲವು ವರ್ಷಗಳಿಂದ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಇದೀಗ ಸರಕಾರಿ ಶಿಕ್ಷಕರ ನೇಮಕಾತಿ (GPSTR, PSTR, HSTR)ಪರೀಕ್ಷೆಗಳಿಗೆ ಅಂತಿಮ ಹಂತದ ತರಬೇತಿಯನ್ನು ಆಯೋಜಿಸಿದ್ದು ತರಬೇತಿಯನ್ನು ಆನ್ಲೈನ್ ಮೂಲಕ ಆಯೋಜಿಸಿದೆ. ನೇಮಕಾತಿ ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳು ಈ ತರಗತಿಗಳನ್ನು ಸದುಪಯೋಗಪಡಿಸಿಕೊಳ್ಳಬಹುದು.
ವಿದ್ಯಾಮಾತಾ ಅಕಾಡೆಮಿಯು ಸರಕಾರಿ ನೇಮಕಾತಿ ಪರೀಕ್ಷೆಗಳಿಗೆ ತರಬೇತಿ ನೀಡುವುದರ ಜೊತೆಗೆ ಶಿಕ್ಷಕರ ಅರ್ಹತಾ ಪರೀಕ್ಷೆಗಳಿಗೂ ತರಬೇತಿ ನೀಡುತ್ತಿದ್ದು ಇಲ್ಲಿಯವರೆಗೆ 800ಕ್ಕೂ ಅಧಿಕ ಅಭ್ಯರ್ಥಿಗಳನ್ನು ವಿವಿಧ ಅರ್ಹತಾ ಪರೀಕ್ಷೆಗಳಾದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET), ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ(KSET), ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (CTET), ರಾಷ್ಟೀಯ ಅರ್ಹತಾ ಪರೀಕ್ಷೆ(NET)ಯಲ್ಲಿ ಉತ್ತೀರ್ಣಗೊಳಿಸಿದ ಹೆಗ್ಗಳಿಕೆಯೊಂದಿಗೆ ತರಬೇತಿ ಆಯೋಜಿಸಿರುವ ವಿದ್ಯಾಮಾತಾವು ಕಳೆದ ಸಾಲಿನ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ತರಬೇತಿ ನೀಡಿ 5 ವಿದ್ಯಾರ್ಥಿಗಳನ್ನು GPSTR ನೇಮಕಾತಿಯಲ್ಲಿ ಉತ್ತೀರ್ಣಗೊಂಡಿದ್ದಾರೆ.
GPSTR/PSTR /HSTR ನೇಮಕಾತಿಗೆ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳಿಗೆ 26.10.2026ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ ಸರಕಾರಿ ಶಿಕ್ಷಕರಾಗುವ ಕನಸನ್ನು ನನಸು ಮಾಡಿಕೊಳ್ಳಲು ಸೂಕ್ತ ಅವಕಾಶವಾಗಿದೆ.
ವಿದ್ಯಾಮಾತಾ ಅಕಾಡೆಮಿ ಆಯೋಜಿಸಿರುವ ಅಂತಿಮ ಹಂತದ ಈ ತರಬೇತಿಯು ಲೈವ್ ತರಗತಿಗಳ ಮೂಲಕ ರಾತ್ರಿ ಸಮಯ 7 ರಿಂದ 10 ರವರೆಗೆ ನಡೆಯಲಿದೆ, ಅಲ್ಲದೇ ಪ್ರತೀ ದಿನ ಮಾದರಿ ಪ್ರಶ್ನೆ ಪತ್ರಿಕೆಗಳ ಪರೀಕ್ಷೆಗಳು, ಅಧ್ಯಯನ ಸಾಮಾಗ್ರಿಗಳು(Study Meterials) ಹಾಗೂ ನೇಮಕಾತಿಗೆ ಸಂಬಂದಿಸಿದ ನಿರಂತರ ಮಾರ್ಗದರ್ಶನ, ಇವೆಲ್ಲವನ್ನು ಒಳಗೊಂಡಿರುವ ಅಂತಿಮ ಹಂತದ ತರಬೇತಿ ಪಡೆಯಲಿಚ್ಛಿಸುವ ಆಸಕ್ತ ಅಭ್ಯರ್ಥಿಗಳು ಕೂಡಲೇ ಪುತ್ತೂರಿನ APMC ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಕಛೇರಿ ಸಂಖ್ಯೆ (9620468869 / 9945182516) ಸಂಪರ್ಕಿಸಿ ದಾಖಲಾತಿ ಪಡೆದುಕೊಳ್ಳಬಹುದು.













