ಇತ್ತೀಚೆಗಷ್ಟೇ ಶಾಸಕ ಅಶೋಕ್ ರೈ ವಿರುದ್ಧ ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ ಸುದ್ದಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಹಕೀಮ್ ಕೋರ್ನಡ್ಕರನ್ನು ಇದೀಗ ಅಶೋಕ್ ಕುಮಾರ್ ರೈಯನ್ನು ಭೇಟಿಯಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಹಕೀಮ್ ಕೂರ್ನಡ್ಕ ಹಾಗೂ ಅಶೋಕ್ ಕುಮಾರ್ ರೈ ಜಗಳ ಇದೀಗ ಸಂಧಾನವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.ಚುನಾವಣೆ ಸಮೀಪಿಸುತ್ತಿರುವಾಗ ಅಶೋಕ್ ಕುಮಾರ್ ರೈ ಹಕೀಮ್ ಕೋರ್ನಡ್ಕರಿಗೆ ಶರಣಾದ್ರಾ ಎನ್ನುವ ಗುಸು ಗುಸು ಮಾತು ಹಲವು ಸಂಶಯಗಳಿಗೆ ಕಾರಣವಾಗಿದೆ.ಅಲ್ಪಸಂಖ್ಯಾತರ ಮತಗಳನ್ನು ಕಳೆದುಕೊಂಡರೆ ಮುಂದಿನ ಚುನಾವಣೆ ಎದುರಿಸಲು ಕಷ್ಟ ಎನ್ನುವ ಮೂಲಗಳ ಮಾಹಿತಿಗೆ ಅಶೋಕ್ ರೈಗಳು ಬೆದರಿದ್ದಾರೆ ಎಂಬ ಆಶಯಗಳು ಇದೀಗ ರಾಜಕೀಯ ವಲಯದಲ್ಲಿ ಜೋರಾಗಿದೆ. ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಈ ಜಗಳ ಅಶೋಕ್ ರೈಗಳಿಗೆ ಮುಜುಗರ ಉಂಟು ಮಾಡಿತ್ತು. ಆದರೆ ಹಕೀಮ್ ಕೂರ್ನಡ್ಕ ಯಾವುದಕ್ಕೂ ಬಗ್ಗದೆ ಶಾಸಕರ ವಿರುದ್ಧ ಹಕೀಮ್ ಜನ ಮನ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದರು. ಇದೆಲ್ಲದರಿಂದ ಅಶೋಕ್ ರೈಗಳು ಚುನಾವಣಾ ಭೀತಿ ಎದುರಿಸಿದರು ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.ಇವೆಲ್ಲನವೂ ರಾಜಕೀಯದ ಕೀಳು ನಾಟಕವೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇವರ ನಾಟಕಕ್ಕೆ ಸಾಮಾನ್ಯ ಕಾರ್ಯಕರ್ತರು ಹೊಡೆದಾಡಿ ಕೊಳ್ಳುವಂತಾಗಿದೆ.












