ವಿಮಾನದಲ್ಲಿ ಹೃದಯಾಘಾತ ತಪ್ಪಿಸಿದ ಈಶ್ವರಮಂಗಲದ ವೈದ್ಯ!! ಡಾ. ಶ್ರೀಕುಮಾರ್ ಕತ್ರಿಬೈಲ್ ಸಮಯಪ್ರಜ್ಞೆಗೊಂದು ಸಲಾಂ!!

ಉತ್ತರ ಭಾರತದ ಪ್ರವಾಸ ಮುಗಿಸಿ ಕುಟುಂಬ ಸಮೇತ ವಿಮಾನದಲ್ಲಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ, ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವನಿಗೆ ದಿಢೀರ್ ಹೃದಯಾಘಾತ ಸಂಭವಿಸಿತು. ಸ್ಥಿತಿ ಗಂಭೀರವಾಗಿದ್ದನ್ನು ಕಂಡು ವಿಮಾನದ ಸಿಬ್ಬಂದಿ ತುರ್ತಾಗಿ ವೈದ್ಯರ ನೆರವಿಗಾಗಿ ವಿನಂತಿಸಿದರು. ಈ ಸಂದರ್ಭದಲ್ಲಿ ಕಿಂಚಿತ್ತೂ ತಡಮಾಡದೆ ರಂಗಕ್ಕಿಳಿದ ಈಶ್ವರಮಂಗಲದ ಡಾ. ಶ್ರೀಕುಮಾರ್ ಕತ್ರಿಬೈಲ್ ತಕ್ಷಣವೇ ಸೂಕ್ತ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಿ ಆ ಪ್ರಯಾಣಿಕನ ಜೀವ ಉಳಿಸುವಲ್ಲಿ ಯಶಸ್ವಿಯಾದರು.

Advertisement

ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಮಾನವೀಯತೆ ಮೆರೆದ ಡಾ. ಶ್ರೀಕುಮಾರ್ ಕತ್ರಿಬೈಲ್ ಅವರ ಸಮಯಪ್ರಜ್ಞೆ ಹಾಗೂ ಸೇವೆಯನ್ನು ಪ್ರಶಂಸಿಸಿ ಸಾರ್ವಜನಿಕರಿಂದ ಹಾಗೂ ನಾಡಿನ ಜನತೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page