ಹೆಣ್ಣು ಕೊಟ್ಟ ಮಾವ ಲಂಚ ಕೊಟ್ಟರು!!

ದಾವಣಗೆರೆ : ಅಳಿಯನಿಗೆ ಸಹಾಯಕ ಪ್ರಾಧ್ಯಾಪಕ ಕೆಲಸ ಕೊಡಿಸಲು 13 ಲಕ್ಷ ಹಣ ನೀಡಿ ವಂಚನೆಗೆ ಒಳಗಾದ ವ್ಯಕ್ತಿಯನ್ನು ತರಾಟೆಗೆ ತೆಗೆದು ಕೊಂಡ ಹೈಕೋರ್ಟ್, ಪ್ರಕರಣದಲ್ಲಿ ಹಣ ಸ್ವೀಕರಿಸಿ ವಂಚನೆ ಮಾಡಿದ ವ್ಯಕ್ತಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ. ಹಣ ನೀಡಿದ ವ್ಯಕ್ತಿ ಮನೆಗೆ ಆರು ಜನರನ್ನು ಕಳುಹಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ದಾವಣಗೆರೆಯ ನಿವಾಸಿ ವಿ.ಎಂ.ರಮೇಶ್. ಬಾಬು ಎಂಬಾತ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ನ್ಯಾಯಮೂರ್ತಿ ಶ್ರೀಷಾನಂದ ಅವರ ಪೀಠ ಆದೇಶಿಸಿತು.

Advertisement

ಅರ್ಜಿದಾರ ಆರೋಪಿ ಅಮಾಯಕ ಎಂದು ತೀರ್ಮಾನಿಸುವ ಹಂತಕ್ಕೆ ಪ್ರಕರಣದ ವಿಚಾರಣೆ ತಲುಪಿಲ್ಲ. ಹಾಗಾಗಿ, ಅವರ ವಿರುದ್ಧ ಎಫ್ ಐಆರ್ ರದ್ದುಪಡಿಸಲಾಗದು ಎಂದು ಪೀಠ ತಿಳಿಸಿದೆ. ಇದೇ ವೇಳೆ ಆರೋಪಿಗೆ 13 ಲಕ್ಷ ರು. ನೀಡಿದ ದೂರುದಾರ ಪಂಚಾಕ್ಷರಿಯನ್ನು ತರಾಟೆಗೆ ತೆಗೆದುಕೊಂಡ ಪೀಠ, ಅಳಿಯನಿಗೆ ಕೆಲಸ ಕೊಡಿಸಲು 13 ಲಕ್ಷ ಹಣ ನೀಡಿರುವುದು ಸರಿಯಲ್ಲ. ಕೆಲಸ ಸಿಕ್ಕರೆ ಮಗಳನ್ನು ಅಳಿಯ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಹಣ ನೀಡಿದ್ದೀರಿ. ದುಡಿದು ಸಂಪಾದನೆ ಮಾಡಿದ ಹಣದಲ್ಲಿ ಅಳಿಯ ತನ್ನ ಪತ್ನಿ ಸಾಕಬೇಕು. ಈ ಹಣ ನೀಡುವ ಬದಲು ಕೂಲಿ ಕೆಲಸ ಮಾಡಿ ಹೆಂಡತಿಯನ್ನು ಸಾಕುವಂತೆ ಅಳಿಯನಿಗೆ ಹೇಳಬೇಕಿತ್ತು ಎಂದು ಪೀಠ ಮೌಖಿಕವಾಗಿ ಹೇಳಿದೆಯೆಂದು ಮೂಲಗಳಿಂದ ತಿಳಿದು ಬಂದಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page