ಶಬರಿಮಲೆ ಮಂಡಲ-ಮಕರವಿಳಕ್ಕು 2026-27 ಪ್ರಯುಕ್ತ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತರಿಗೆ ಪುಣ್ಯದ ಮಂಡಲ ವ್ರತ 48 ದಿನಗಳು ನಡೆಯುವುದರಿಂದ ಕೆಲವೊಂದು ಸೂಚನೆಗಳನ್ನು ದೇವಸ್ಥಾನದ ಆಡಳಿತ ಮಂಡಳಿ ನೀಡಿದೆ.
ಮುಖ್ಯವಾಗಿ ಈ ಬಾರಿ ಪಂಪಾದಲ್ಲಿ ಸ್ಪಾಟ್ ಬುಕ್ಕಿಂಗ್ ಇರುವುದಿಲ್ಲ. ಬದಲಾಗಿ ನೀಲಕ್ಕಲ್, ಎರಮೇಲಿ ಮತ್ತು ವಂಡಿಪೆರಿಯಾರ್ ಸತ್ರಂನಲ್ಲಿ ಮಾತ್ರ ಸ್ಪಾಟ್ ಬುಕ್ಕಿಂಗ್ ಇರುತ್ತದೆ ಎಂದು ತಿಳಿದು ಬಂದಿದೆ. ವರ್ಚುವಲ್ ಕ್ಯೂ ಬುಕ್ಕಿಂಗ್ ಅಕ್ಟೋಬರ್ 29ರಿಂದ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ ಎMದು ತಿಳಿದು ಬಂದಿದೆ.
ಇನ್ನು ಆನ್ಲೈನ್ ಬುಕ್ಕಿಂಗ್ ಪ್ರತಿ ದಿನ ನೀಲಕ್ಕಲ್ – ಪಂಪಾ ಮಾರ್ಗ 60000 ಸಾವಿರ ಬುಕ್ಕಿಂಗ್, ಎರುಮೇಲಿ ಅರಣ್ಯ ಮಾರ್ಗ 3000 ಬುಕ್ಕಿಂಗ್ ಹಾಗೂ ವಂಡಿಪೆರಿಯಾರ್ ಸತ್ರಂ ಮಾರ್ಗದಲ್ಲಿ 3000 ಬುಕ್ಕಿಂಗ್ ನಡೆಯಲಿದೆ.
ಸ್ಪಾಟ್ ಬುಕ್ಕಿಂಗ್ ಪ್ರತಿ ದಿನ ನೀಲಕ್ಕಲ್ನಲ್ಲಿ 10000 ಬುಕ್ಕಿಂಗ್, ಎರುಮೇಲಿಯಲ್ಲಿ 2000 ಬುಕ್ಕಿಂಗ್ ಹಾಗೂ ವಂಡಿಪೆರಿಯಾರ್ನಲ್ಲಿ 2000 ಬುಕ್ಕಿಂಗ್ಗಳು ನಡೆಯುತ್ತವೆ ಎಂದು ಪ್ರಕಟಣೆ ತಿಳಿಸಿದೆ.













