ಕಲೆ- ಭಕ್ತಿಯ ಸಂಗಮವಾಗಿ ಹುಲಿವೇಷ ಆರಾಧನೆ : ಸಚ್ಚಿದಾನಂದ ಭಾರತೀ ಸ್ವಾಮೀಜಿ | “ಪುತ್ತೂರುದ ಪಿಲಿಗೊಬ್ಬು-2026 ಸೀಸನ್-4”

ಪುತ್ತೂರು: ತುಳುನಾಡಿನ ಜನರು ಪಶು, ಪಕ್ಷಿ, ಪ್ರಕೃತಿಯಲ್ಲಿ ದೇವರು, ದೈವತ್ವವನ್ನು ಕಾಣುತ್ತಿದ್ದು, ಯಕ್ಷಗಾನ, ಕಂಬಳ, ಹುಲಿವೇಷ ಮೊದಲಾದ ಆಚರಣೆಗಳು ಒಂದೊಂದು ಸಂದೇಶವನ್ನು ಸಾರುತ್ತಿವೆ. ಕಲೆ- ಭಕ್ತಿಯ ಸಂಗಮವಾಗಿ ಹುಲಿವೇಷ ಆರಾಧನೆ ಪಡೆಯುತ್ತಿದ್ದು, ಧಾರ್ಮಿಕ, ಸಂಸ್ಕೃತಿಯ ಅರಿವು ಯುವ ಸಮಾಜಕ್ಕೆ ತಲುಪುವ ಜತೆಗೆ ಸಮಾಜವನ್ನು ಒಗ್ಗಟ್ಟು ಮಾಡಲು‌ ಈ ಸ್ಪರ್ಧೆ ಮಹತ್ವವನ್ನು ಪಡೆದುಕೊಂಡಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

Advertisement

ಅವರು ಶನಿವಾರ ಪುತ್ತೂರು ವಿಜಯ ಸಾಮ್ರಾಟ್ ಸಂಘಟನೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಆಯೋಜಿಸಿದ್ದ ಪುತ್ತೂರುದ ಪಿಲಿಗೊಬ್ಬು-2026 ಸೀಸನ್-4ನ್ನು ಉದ್ಘಾಟಿಸಿ ಅಶೀರ್ವಚನ ನೀಡಿದರು. ವಿಜಯ ಸಾಮ್ರಾಟ್ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ಮಾಧ್ಯಮದೊಂದಿಗೆ ಮಾತನಾಡಿ,ಕೆಲ ವರ್ಷಗಳ ಹಿಂದೆ ಸಾಮಾಜಿಕ ಸೇವೆಯ ಉದ್ದೇಶದಿಂದ ಆರಂಭಗೊಂಡ ನಮ್ಮ ಸಂಘಟನೆ ಬಡಕುಟುಂಬಗಳಿಗೆ ವರ್ಷಕ್ಕೆ ಒಂದರಂತೆ ಈಗಾಗಲೇ 4 ಮನೆ ನಿರ್ಮಿಸಿ ಕೊಡುವ ಕಾರ್ಯ ಮಾಡಿದೆ. ಪ್ರಸ್ತುತ ಕರಾವಳಿಯ ಹುಲಿವೇಷದ ಕಲೆಯನ್ನು ಉಳಿಸುವ ಉದ್ದೇಶದಿಂದ ಹುಲಿವೇಷದ ಸ್ಪರ್ಧೆಯನ್ನು ನಡೆಸುತ್ತಿದೆ ಎಂದರು.
ಸಮಾರಂಭದಲ್ಲಿ ಪುತ್ತೂರು ಪ್ರಜ್ಞಾ ಆಶ್ರಮದ ಅಣ್ಣಪ್ಪ-ಜ್ಯೋತಿ ದಂಪತಿಯನ್ನು ಆರ್.ಎಸ್.ಎಸ್.ಹಿರಿಯ ಮುಂದಾಳು ಡಾ.ಪ್ರಭಾಕರ ಭಟ್ ಕಲ್ಲಡ್ಕ ಇದೆ ಸಂದರ್ಭದಲ್ಲಿ ಸನ್ಮಾನಿಸಿದರು.

Advertisement
Advertisement

ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್, ಆರ್.ಎಸ್.ಎಸ್.ಹಿರಿಯ ಮುಂದಾಳು ಡಾ.ಪ್ರಭಾಕರ ಭಟ್ ಕಲ್ಲಡ್ಕ, ಪುತ್ತೂರಿನ ಹಿರಿಯ ವೈದ್ಯ ಡಾ.ಎಂ.ಕೆ.ಪ್ರಸಾದ್ ಭಂಡಾರಿ, ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಸುಭಾಷ್ ರೈ ಬೆಳ್ಳಿಪಾಡಿ, ವಿನಯ ಸುವರ್ಣ, ಪುಣಚ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ, ಪುತ್ತೂರು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲು, ಪುತ್ತೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಸುದೇಶ್ ಚಿಕ್ಕಪುತ್ತೂರು, ಮಹೇಶ್ ವಳಕುಂಜ ಮೊದಲಾದವರಿದ್ದರು.

ಸಂಘಟನೆಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪದಾಧಿಕಾರಿಗಳಾದ ನಾಗರಾಜ್ ನಡುವಡ್ಕ, ಶರತ್ ಆಳ್ವ ಕೂರೇಲು, ರತನ್ ರೈ ಕುಂಬ್ರ, ರಾಜೇಶ್ ರೈ ಪರ್ಪುಂಜ ಮೊದಲಾದವರಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page