ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರ ಧರ್ಮಪತ್ನಿ ಉಷಾಕುಮಾರಿ (56) ಅವರು ಅಸೌಖ್ಯದಿಂದ ಅಕ್ಟೋಬರ್ 24 ರ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತರ ಅಂತಿಮ ದರ್ಶನವು ಭಾನುವಾರ ಅ.25 ಬೆಳಗ್ಗೆ 10 ರಿಂದ 12ಗಂಟೆಯವರೆಗೆ ಹ್ಯಾಟ್ ಹಿಲ್ನಲ್ಲಿರುವ ಅವರ ಸ್ವಗೃಹದಲ್ಲಿ ನಡೆಯಲಿದೆ. ಅಂತಿಮ ಸಂಸ್ಕಾರ ಮಧ್ಯಾಹ್ನ 12.30ಕ್ಕೆ ಕದ್ರಿ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.













