ಕರಾವಳಿ ಕ್ಯಾಬಿನೆಟ್‌ನಲ್ಲಿ ಜಾರಿಯಾದ ಅನುಮೋದನೆಗಳ ವಿಸ್ತೃತ ವರದಿ! ತಪ್ಪದೇ ಓದಿ…

ಮಂಗಳೂರು: ಸೆಪ್ಟೆಂಬರ್‌ 18 ರಂದು ನಡೆದ ಐತಿಹಾಸಿಕ ಕರಾವಳಿ ಕ್ಯಾಬಿನೆಟ್‌ನಲ್ಲಿ ಜಿಲ್ಲೆಗೆ ಬಂಪರ್‌ ಕೊಡುಗೆಗಳು ಸಿಕ್ಕಿದೆ. ತುಳು ಭಾಷೆಗೆ ಮಾನ್ಯತೆ ಸಹಿತ ಜಿಲ್ಲೆಯಾದ್ಯಂತ ಅಭಿವದ್ಧಿಗೆ 32 ಸಾವಿರದ 611 ಕೋಟಿ ರುಪಾಯಿಗಳ ಯೋಜನೆಯನ್ನು ಸರ್ಕಾರ ನೀಡಿದೆ. ಈ ಕುರಿತು ಡಿ.ಕೆ. ಶಿವಕುಮಾರ್‌ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ಈ ಸಂದರ್ಭದಲ್ಲಿ ಯಾವೆಲ್ಲಾ ಯೋಜನೆಗಳು ಸರಕಾರದಿಂದ ಅನುಮೋದನೆಗೊಂಡಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

Advertisement
  • ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ನಿರ್ಧಾರ.
  • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಮಾಡಲು ಪ್ರಸ್ತಾಪ; ಒಂದು ತಿಂಗಳು ಪಬ್ಲಿಕ್‌ ಚರ್ಚೆಗೆ ಅವಕಾಶ.
  • ಕರಾವಳಿ ಪ್ರವಾಸೋದ್ಯಮಕ್ಕೆ ಬಿಗ್‌ ಬೂಸ್ಟ್‌, ಶಿಕ್ಷಣ, ಆರೋಗ್ಯ, ಮೀನುಗಾರಿಕೆ, ಬಂದರು ಪ್ರಗತಿಗೆ ಒಪ್ಪಿಗೆ ಮುದ್ರೆ.
  • ಕರಾವಳಿ- ಮಲೆನಾಡು ಭಾಗಕ್ಕೆ ಒಟ್ಟು 32,611 ಕೋಟಿ ರೂ. ಗೆ ಅನುಮೋದನೆ.
  • ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಿಶೇಷವಾಗಿ 5 ಕೋಟಿ ಅನುದಾನ ಘೋಷಣೆ.
  • ಪುತ್ತೂರು ಸರ್ಕಾರಿ ವೈದ್ಯಕೀಯ ಕಾಲೇಜಿಗೆ 550 ಕೋಟಿ ರೂ. ಅನುದಾನಕ್ಕೆ ಅನುಮೋದನೆ.
  • ಕರಾವಳಿ- ಮಲೆನಾಡು ಭಾಗಕ್ಕೆ ಹೊಸ ಪ್ರವಾಸೋದ್ಯಮ ನೀತಿ.
  • ಕರಾವಳಿ ಜಿಲ್ಲೆಗಳ ದ್ವೀಪಗಳ ಅಭಿವೃದ್ಧಿಗೆ ಗ್ರೀನ್‌ ಸಿಗ್ನಲ್.
  • ಲೈಟ್‌ ಹೌಸ್‌ ಪ್ರದೇಶಗಳಲ್ಲಿ ತ್ರೀಸ್ಟಾರ್‌ ಆತಿಥ್ಯ.
  • ಬಡಗ ಎಕ್ಕಾರಿನಲ್ಲಿ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನ ನಿರ್ಮಾಣ.
  • ಮಾಣಿಲ ಸಹಿತ 6 ಪ್ರಮುಖ ಸೇತುವೆಗಳ ನಿರ್ಮಾಣ.
  • ಮೀನುಗಾರಿಕೆಗೆ ಕೊಂಡಿ ರಸ್ತೆಗಳ ನಿರ್ವಹಣೆ.
  • ಮೀನುಗಾರಿಕೆಯ ವಿವಿಧ ಕಾಮಗಾರಿಗಳಿಗೆ ಬೂಸ್ಟ್.
  • ಎಕ್ಕೂರಿನಲ್ಲಿ ಅತ್ಯಾಧುನಿಕ ಸಗಟು ಮೀನು ಮಾರುಕಟ್ಟೆ.
  • ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು,
  • ಪುತ್ತೂರಿನ ವಿಟ್ಲ ನೀರಾವರಿ ಯೋಜನೆಗೆ 1೦೦ ಕೋಟಿ ಅನುದಾನ.
  • ಅರಣ್ಯ ಇಲಾಖೆ ನೇಮಕಾತಿಯಲ್ಲಿ ಬುಡಕಟ್ಟು ಜನಾಂಗಗಳಿಗೆ ಶೇ. 30 ಪ್ರಾತಿನಿಧ್ಯ.
  • ಮಂಗಳೂರಿನ ವೆನ್‌ ಲಾಕ್‌ ಜಿಲ್ಲಾಸ್ಪತ್ರೆ ಉನ್ನತೀಕರಣ.
  • ಮಂಗಳಾ ಕ್ರೀಡಾಂಗಣ ಅಭಿವೃದ್ಧಿ.
  • ಕೇಂದ್ರ ಕಾರಾಗೃಹ ಮುಖ್ಯ ಗೋಡೆಗೆ 10 ಕೋಟಿ.
  • ಮಂಗಳೂರು ಜಲ ಮೆಟ್ರೋಗೆ ಅನುಮೋದನೆ.
  • ಪಿಲಿಕುಳ ನಿಸರ್ಗಧಾಮ ಭೂಮಿಯ ಗುತ್ತಿಗೆ ಅವಧಿ ರದ್ದು.
  • ಒಳಚರಂಡಿ ಕಾಮಗಾರಿಗೆ ಬೂಸ್ಟ್.
  • ಮಂಗಳೂರು ರಸ್ತೆ ಅಭಿವೃದ್ಧಿಗೆ 400 ಕೋಟಿ ರೂ ಮೀಸಲು.
  • ಮಠ, ಚರ್ಚ್‌ ಸೇರಿ ವಿವಿಧ ಸಂಸ್ಥೆಗಳಿಗೆ ಭೂ ಮಂಜೂರಾತಿ.
  • ಕರಾವಳಿ ಲೇಖಕಿಯರ ವಾಚಕಿಯರ ಸಂಘಕ್ಕೆ 0.05 ಎಕರೆ ಭೂ ಮಂಜೂರಾತಿ.
  • ಕರ್ನಾಟಕ ಕಡಲ ಜೈವಿಕ ತಂತ್ರಜ್ಞಾಣ ನೀತಿ 2026-31.
  • ಕರ್ನಾಟಕ ಒಳನಾಡು ಹಡಗುಗಳು ನಿಯಮಗಳು 2026 ಅಧಿಸೂಚಿಸಲು ಅನುಮೋದನೆ.
  • ಸಿಝಡ್‌ ಎಂಪಿ-2019 ಪರಿಷ್ಕರಣೆ.
  • ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮೋದನೆ.
  • ದ.ಕ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳ ಕರಾವಳಿಯನ್ನು ವಿಶೇಷ ಸಮುದ್ರ ವಲಯ ಎಂದು ಅಧಿಸೂಚನೆ.
  • ರಾಜ್ಯದ 15 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿ.
  • ಮತಪೆಟ್ಟಿಗೆ ಖರೀದಿಗೆ 151.31 ಕೋಟಿ ಮೀಸಲು.
  • ಗ್ರಾಮ ಗ್ರಂಥಾಲಯಗಳಿಗೆ ಕಂಪ್ಯೂಟರ್‌ ಖರೀದಿ.
  • ಮಂಕಿ ಬಹು ಉಪಯೋಗಿ ಬಂದರು, ಹಡಗು ನಿರ್ಮಾಣ ಕೇಂದ್ರ.
  • ಗಂಗೊಳ್ಳಿಯಲ್ಲಿ ಹಡಗು ನಿರ್ಮಾಣ ಅಂಗಳಕ್ಕೆ ಅನುಮೋದನೆ.
  • ಪಿಪಿಪಿ ಮಾದರಿಯಲ್ಲಿ ಕರಾವಳಿ ಪ್ರಯಾಣಿಕರ ದೋಣಿ ಸೇವೆ ಕಾರ್ಯಾಚರಣೆ.
  • ಕೆಪಿಎಸ್‌ ಶಾಲೆಗಳ ಅಭಿವೃದ್ಧಿ.
  • ಕಾಪು ಪಟ್ಟಣಕ್ಕೆ ನೀರು ಸರಬರಾಜು ಯೋಜನೆ.
  • ಕರ್ನಾಟಕ ಸುಸ್ಥಿರ ದತ್ತಾಂಶ ಕೇಂದ್ರ ನೀತಿ 2026-31ಕ್ಕೆ ಅನುಮೋದನೆ.
  • ಶಿಲ್ಪಾಕಲಾ ಕ್ಲಸ್ಟರ್‌ನ್ನು 20 ಕೋಟಿ ವೆಚ್ಛದಲ್ಲಿ ಸ್ಥಾಪಿಸಲು ಅನುಮೋದನೆ.
  • ಮೀನುಗಾರಿಕೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ನಿರ್ಮಾಣ.

ಇದು ತುಳುನಾಡು ಸಹಿತ ವಿವಿಧ ಜಿಲ್ಲೆಗಳಿಗೆ ದೊಡ್ಡ ವರವಾಗಿ ಪರಿಣಮಿಸಲಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯಾಗಿ ಪರಿವರ್ತಿಸಲು ಜನಾಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಈ ಯೋಜನೆಗಳು ಶೀಘ್ರದಲ್ಲೇ ಜಾರಿಗೆ ಬರಲಿ ಎಂಬುದೇ ಎಲ್ಲಾ ತುಳುವರ ಅಭಿಪ್ರಾಯ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page