ಕರಾವಳಿ ಕ್ಯಾಬಿನೆಟ್‌ನಲ್ಲಿ ತುಳುನಾಡಿಗೆ ಬಂಪರ್ ಕೊಡುಗೆಗಳು ಸಿಕ್ಕಿದೆ. ಸಿಎಂ ಡಿ.ಕೆ. ಶಿವಕುಮಾರ್ ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ತುಳು ಭಾಷೆ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಹೊರಹೊಮ್ಮಿದೆ. ಮಂಗಳೂರಿನಲ್ಲಿ ನಡೆದ ಕರಾವಳಿ ಕ್ಯಾಬಿನೆಟ್‌ನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದಷ್ಟೇ ಅಲ್ಲದೆ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಜಿಲ್ಲೆಗೆ ಕೆಲವೊಂದು ಅಭೂತಪೂರ್ವ ಘೋಷಣೆಗಳನ್ನು ಮಾಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
- ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ನಿರ್ಧಾರ.
- ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಮಾಡಲು ಪ್ರಸ್ತಾಪ; ಒಂದು ತಿಂಗಳು ಪಬ್ಲಿಕ್ ಚರ್ಚೆಗೆ ಅವಕಾಶ.
- ರಸ್ತೆ ಅಭಿವೃದ್ಧಿಗೆ 16000 ಕೋಟಿ ಬೃಹತ್ ಘೋಷಣೆ.
- ಕರಾವಳಿ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ.
- ಪುತ್ತೂರಿಗೆ ಮೆಡಿಕಲ್ ಕಾಲೇಜಿಗೆ ಒಪ್ಪಿಗೆ ಮತ್ತು 579.49 ಕೋಟಿ ಅನುದಾನ ಘೋಷಣೆ.
- ಪುತ್ತೂರಿನ ವಿಟ್ಲ ನೀರಾವರಿ ಯೋಜನೆಗೆ 1೦೦ ಕೋಟಿ ಅನುದಾನ.
- ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಿಶೇಷವಾಗಿ 5 ಕೋಟಿ ಅನುದಾನ ಘೋಷಣೆ.
- ಮೀನುಗಾರಿಕೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ನಿರ್ಮಾಣ.
- ಒಟ್ಟು 32 ಸಾವಿರದ 611 ಕೋಟಿ ಕರಾವಳಿ ಭಾಗಕ್ಕೆ ಘೋಷಣೆ.
ಇದು ತುಳುನಾಡಿಗೆ ದೊಡ್ಡ ವರವಾಗಿ ಪರಿಣಮಿಸಲಿದೆ. ಈ ಯೋಜನೆಗಳು ಶೀಘ್ರದಲ್ಲೇ ಜಾರಿಗೆ ಬರಲಿ ಎಂಬುದೇ ಎಲ್ಲಾ ತುಳುವರ ಅಭಿಪ್ರಾಯ.













