ದೇಶದ ಮಾಜಿ ಪೊಲೀಸರು, ಸಿಎಪಿಎಫ್ ಸಿಬಂದಿ, ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುವಾಗ ಹುತಾತ್ಮರಾದವರ ಪತ್ನಿಯರ ಜೀವನಕ್ಕೆ ನೆರವಾಗುವ ನಿಟ್ಟಿನಲ್ಲಿ ʼಕರ್ಮವೀರʼ ಯೋಜನೆಯನ್ನು ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಈ ಯೋಜನೆಯಡಿ ದೇಶದ 400 ಕಾಮನ್ ಸರ್ವೀಸ್ ಸೆಂಟರ್ ಆರಂಭಿಸಲಾಗುವುದು. ಈ ಕೇಂದ್ರಗಳನ್ನು ಹುತಾತ್ಮರ ಪತ್ನಿಯರು ನಡೆಸಲಿದ್ದಾರೆ. ಈ ಕಾಮನ್ ಸರ್ವೀಸ್ ಸೆಂಟರ್ಗಳಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಡಿಜಿಟಲ್ ಸೇವೆಯನ್ನು ಒದಗಿಸಲಾಗುತ್ತದೆ.













