ಗಾಯ ಗುಣಪಡಿಸಲು ಜೇನು ತುಪ್ಪದ ಮೊರೆ ಹೋಗಿದ್ದ ಉಗ್ರಗಾಮಿ!! ಪಹಲ್ಗಾಮ್‌ ದಾಳಿಕೋರನ ಸ್ಫೋಟಕ ಮಾಹಿತಿ ಬಯಲು!

ಶ್ರೀನಗರ: ನಿಷೇಧಿತ ಲಷ್ಕರೆ ತಯ್ಯಬಾ ಉಗ್ರ ಸಂಘಟನೆಯ ಉಗ್ರ ಹಶೀಮ್‌ ಮೂಸಾ, ಕಾಡಿನಲ್ಲಿ ತಲೆಮರಿಸಿಕೊಂಡಿದ್ದಾಗ ತನ್ನ ಗುಂಡಿನ ಗಾಯಗಳನ್ನು ಗುಣಪಡಿಸಿಕೊಳ್ಳಲು ಆಯುರ್ವೇದದ, ಅಂದರೆ ಜೇನು ತುಪ್ಪದ ಮೊರೆ ಹೊಗಿದ್ದ ಎಂಬ ಅಚ್ಚರಿಯ ಸಂಗತಿ ಬಹಿರಂಗವಾಗಿದೆ. 2025ರ ಪಹಲ್ಗಾಮ್‌ ಭಯೋತ್ಪಾದನ ದಾಳಿಯ ಸಂಚುಕೋರರಲ್ಲಿ ಒಬ್ಬನಾಗಿದ್ದ ಈತ, ಇತ್ತೀಚೆಗೆ ಹತ್ಯೆಗೀಡಾಗಿದ್ದ.

Advertisement

ಅಧಿಕಾರಿಗಳ ಮಾಹಿತಿ ಪ್ರಕಾರ, ಜಮ್ಮು ಪ್ರದೇಶದ ರಾಜೌರಿಯ ದೊರಿಮಾಲ್‌-ಗಂಬೀರ್‌ ಮೊಘಲಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ ಸಂದರ್ಭದಲ್ಲಿ ಮೂಸಾ ಗುಂಡೇಟಿಗೆ ತುತ್ತಾಗಿದ್ದ. ಸುಮಾರು 45 ದಿನಗಳಿಗೂ ಹೆಚ್ಚುಕಾಲ ಮುಂದುವರಿದ ಈ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಪೂಂಚ್‌ ಮತ್ತು ರಾಜೌರಿ ಕಾಡುಗಳಲ್ಲಿ ಆಶ್ರಯ ಪಡೆದಿದ್ದ. ಭದ್ರತ ಪಡೆಗಳ ಬಿಗಿ ಕಾವಲಿನ ಕಾರಣದಿಂದ ಈತನಿಗೆ ಹೊರಗಿನಿಂದ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಗಾಯ ಬೇಗ ವಾಸಿಯಾಗಳು, ಸೋಂಕು ತಡೆಯಲು, ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಜೇನುತುಪ್ಪವನ್ನು ಗಾಯಗಳಿಗೆ ಹಚ್ಚಿಕೊಂಡು ಅದರ ಮೇಲೆ ಬಟ್ಟೆ ಕಟ್ಟಿಕೊಂಡಿದ್ದ ಎಂದು ಗೊತ್ತಾಗಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page