ಮಲ್ಲಿಕಾರ್ಜುನ ಖರ್ಗೆಯಿಂದ ಪ್ರಧಾನಿ ಮೋದಿಗೆ ಲೆಟರ್!!‌ ರಾಜ್ಯದ ಬರ ಪರಿಸ್ಥಿತಿಗೆ ₹3,70,530 ಕೋಟಿ ನೆರವು ನೀಡುವಂತೆ ಖರ್ಗೆ ಮನವಿ!!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ತಕ್ಷಣವೇ ಮಧ್ಯಪ್ರವೇಶಿಸಿ ಬರ ಪರಿಹಾರ ಘೋಷಣೆಮಾಡಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದಾರೆ.
ಖರ್ಗೆ ಅವರು ಈ ಪತ್ರವನ್ನು ಸಾಮಾಜಿಕಮಾಧ್ಯಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ 11 ಪುಟಗಳ ಪತ್ರದಲ್ಲಿ ಖರ್ಗೆ ಅವರು, ರಾಜ್ಯದ ಸಣ್ಣ ಮತ್ತು ಅತಿ ಸಣ್ಣರೈತರಿಗೆ ತಕ್ಷಣ ಪರಿಹಾರ ಒದಗಿಸುವುದು ಸೇರಿದಂತೆ ಆರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಸೆಪ್ಟೆಂಬರ್ ವೇಳೆಗೆ ಶೇ 58 ರಷ್ಟು ಮಳೆ ಕೊರತೆಯಾಗಿದ್ದು, ರಾಜ್ಯವು ಅತ್ಯಂತ ಭೀಕರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬೆಳೆ ನಷ್ಟದಿಂದಾಗಿ ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ₹18,74,823 ಕೋಟಿ ನಷ್ಟ ಸಂಭವಿಸಿದ್ದು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಕಾಯ್ದೆ ಅಡಿಯಲ್ಲಿ ₹3,70,530 ಕೋಟಿ ನೆರವು ನೀಡುವಂತೆ ಖರ್ಗೆ ಮನವಿ ಮಾಡಿದ್ದಾರೆ.

Advertisement

ಪ್ರಮುಖ ಆರು ಬೇಡಿಕೆಗಳು ಹೀಗಿವೆ :

Advertisement
Advertisement
  • ತಕ್ಷಣ ಬರ ಅಧ್ಯಯನ: ಬರ ಪರಿಸ್ಥಿತಿ ಮತ್ತು ಬೆಳೆ ನಷ್ಟವನ್ನು ಖುದ್ದಾಗಿ ಪರಿಶೀಲಿಸಲು ತಕ್ಷಣವೇ ಕೇಂದ್ರದ ಅಧ್ಯಯನ ತಂಡವ ರಾಜ್ಯಕ್ಕೆ ಕಳುಹಿಸಿಕೊಡಬೇಕು.
  • ₹3,70,530 ಕೋಟಿ ಬಿಡುಗಡೆ: ಯಾವುದೇ ರೀತಿ ವಿಳಂಬ ಹಾಗೂ ಕಡಿತಮಾಡದೆ, ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್ ನಿಯಮಾವಳಿಗಳಂತೆ ಕರ್ನಾಟಕ ಕೋರಿರುವ ಸಂಪೂರ್ಣ ಮೊತ್ತವನ್ನು ಮಂಜೂರುಮಾಡಿ ಬಿಡುಗಡೆ ಮಾಡಬೇಕು.
  • ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವು: ಹಳೆಯ 2015–16ರ ಕೃಷಿ ಗಣತಿಯ ಬದಲಿಗೆ, ಕರ್ನಾಟಕದ ಪರಿಷ್ಕೃತ ‘ಭೂಮಿ’ ದಾಖಲೆಗಳ ಆಧಾರದ ಮೇಲೆ ಇನ್‌ಪುಟ್ ಸಬ್ಸಿಡಿಯನ್ನು ಲೆಕ್ಕಾಚಾರಮಾಡಿ ನೆರವು ನೀಡಬೇಕು. ಇದರಿಂದ ಅರ್ಹ ರೈತರು ಪರಿಹಾರದಿಂದ ವಂಚಿತರಾಗುವುದು ತಪ್ಪುತ್ತದೆ.
  • ಬರ ಘೋಷಣೆ: ಪರಿಶೀಲನೆಗೆ ಒಳಪಟ್ಟಿರುವ 11 ಹೆಚ್ಚುವರಿ ತಾಲೂಕುಗಳನ್ನು ಹಾಗೂ ಅರ್ಹತೆ ಪಡೆಯುವ ಇತರ ತಾಲೂಕುಗಳನ್ನು ಕೇಂದ್ರ ಬರ ಪೀಡಿತ ಎಂದು ಘೋಷಣೆ ನೆರವು ನೀಡಬೇಕು.
  • ಕುಡಿಯುವ ನೀರು: ಕಾವೇರಿ ಮತ್ತು ಜಲವಿದ್ಯುತ್ ಜಲಾನಯನ ಪ್ರದೇಶಗಳಲ್ಲಿ ಜಲಾಶಯಗಳ ನೀರು ಗಣನೀಯವಾಗಿ ಕಡಿಮೆಯಾಗಿರುವುದರಿಂದ, ಕುಡಿಯುವ ನೀರಿನ ಭದ್ರತೆ ಮತ್ತು ಪರ್ಯಾಯ ವಿದ್ಯುತ್ ವೆಚ್ಚಕ್ಕಾಗಿ ಹೆಚ್ಚಿನ ಆರ್ಥಿಕ ನೆರವು ನೀಡಬೇಕು.
  • 31 ಲಕ್ಷ ಹೆಚ್ಚು ರೈತ ಕುಟುಂಬಗಳಿಗೆ ಸಂಕಷ್ಟ: ರಾಜ್ಯದ 31 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ರಾಜಕೀಯ ಮಾಡದೇ, ಅರ್ಹತೆಯ ಆಧಾರದ ಮೇಲೆ ತುರ್ತಾಗಿ ನೆರವು ನೀಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page