ಮಂಗಳೂರು : ಕರ್ನಾಟಕದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಕಾವೇರುತ್ತಿರುವ ಸಂದರ್ಭದಲ್ಲೇ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಕುರಿತು ಅಶೋಕ್ ಕುಮಾರ್ ರೈ ಕೂಡ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದರು.
ಇದೀಗ ಇದರ ಕುರಿತು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮತ್ತು ವಕೀಲ ಮೋಹನ್ ರಾಜ್ ಕೆ.ಆರ್., ಶಾಸಕ ಅಶೋಕ್ ರೈಯವರು ಧಮ್ ಇದ್ದರೆ ಇನ್ನೊಮ್ಮೆ ಪುತ್ತೂರಿನಲ್ಲಿ ಗೆದ್ದು ತೋರಿಸಿ ಎಂದು ಸವಾಲು ಹಾಕಿದ್ದಾರೆ.
ನಿಮ್ಮ ಫಿಲಂ ಡೈಲಾಗ್ಗಳಿಗೆ ಬಿಜೆಪಿ ಬಗ್ಗಲ್ಲ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರಿಗೆ ಇರುವ ರಾಜಕೀಯ ಅನುಭವ ನಿಮಗಿದೆಯೇ?. ಸತೀಶ್ ಕುಂಪಲ ಅವರನ್ನು ಕೆಣಕಿದರೆ ಬಿಜೆಪಿ ಮಂಗಳೂರು ಮಂಡಲ ಸುಮ್ಮನೆ ಕೂರಲ್ಲ. ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ಜಾಲತಾಣ ಮೂಲಗಳು ಹೇಳಿವೆ.













