ಅಮೆರಿಕಾದ ದಿಗ್ಬಂಧನದಿಂದ ಇರಾನ್‌ನ ಔಷಧಿಗಳ ಬೆಲೆ 3 ಪಟ್ಟು ಹೆಚ್ಚು! ಭಾರತಕ್ಕೂ ಪ್ರಭಾವ ಬೀರಲಿದೆಯೇ??

ಇರಾನ್‌ ಮೇಲೆ ಕೈಗೊಂಡ ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ದಾಳಿಯಿಂದಾಗಿ ಹಾಗೂ ಅಮೆರಿಕದ ನೌಕಾ ದಿಗ್ಬಂಧನದಿಂದಾಗಿ ಇರಾನ್‌ನಲ್ಲಿ ಔಷಧಿಗಳ ಬೆಲೆ 3 ಪಟ್ಟು ಹೆಚ್ಚಾಗಿದೆ ಎಂದು ವರದಿಗಳು ಬಹಿರಂಗಪಡಿಸಿದೆ.
ಇರಾನ್‌ ಮೇಲೆ ಅಮೆರಿಕವು ಯುದ್ಧದ ಬಳಿಕ ಸಂಪೂರ್ಣ ನಿರ್ಬಂಧ ಘೋಷಿಸಿದೆ. ಇರಾನ್‌ ಬಂದರುಗಳನ್ನು ನಿಯಂತ್ರಣಕ್ಕೆ ಪಡೆದುಕೊಂಡಿದೆ. ಹಾಗಾಗಿ ಬೇಕಾಗಿರುವ ಔಷಧಗಳನ್ನು 80ರಷ್ಟು ಉತ್ಪಾದನೆ ಮಾಡಿಕೊಂಡರು ಅದಕ್ಕೆ ಬಳಸುವ ಕಚ್ಚಾವಸ್ತುಗಳ ಲಭ್ಯತೆಯ ಕೊರತೆಯಿಂದ ಇರಾನ್‌ನಲ್ಲಿ ಔಷಧಗಳ ಬೆಲೆ ಹೆಚ್ಚಾಗಿದೆ.

Advertisement

ಡಯಾಲಿಸಿಸ್‌ ಪಡೆಯುವ ರೋಗಿಗಳ ಮಾತ್ರೆಗಳ ಬೆಲೆ ಶೇ. 350ರಷ್ಟು ಜಾಸ್ತಿಯಾಗಿದೆ. ಅಗತ್ಯವಿರುವ ಔಷಧಿಗಳ ಲಭ್ಯತೆ ಕುಸಿತವಾಗಿದೆ. ಅಮೆರಿಕದ ದಾಳಿಗೆ 40ಕ್ಕೂ ಅಧಿಕ ಔಷಧಿಗಳ ಘಟಕಗಳು ನಾಶವಾಗಿದೆ. ಇದರಿಂದಾಗಿ ಬೆಲೆ ಮತ್ತೊದೆಡೆ, ಇರಾನ್‌ನಲ್ಲಿ ಆಹಾರ ಸೇರಿದಂತೆ ಹಲವು ಅಗತ್ಯವಸ್ತುಗಳ ಬೆಲೆಯೂ ಹೆಚ್ಚಾಗಿದೆ. ನಿರುದ್ಯೋಗವು ಜಾಸ್ತಿಯಾಗಿದೆ. ಇದೇ ವೆಳೆಯಲ್ಲಿ ಇರಾನಿನ ಕರೆನ್ಸಿಯು ದಾಖಲೆಯ ಕನಿಷ್ಟ ಮಟ್ಟಕ್ಕೆ ಕುಸಿತ ಕಂಡಿದ್ದು, ಹಿಂದಿನ 27 ದಿನಗಳಲ್ಲಿ ಅಮೆರಿಕದ ಡಾಲರ್‌ ಎದುರು ಶೇ. 13.60ರಷ್ಟು ಕುಸಿತವಾಗಿದೆ ಎಂದು ಮೂಲಗಳ ವರದಿಯಲ್ಲಿ ತಿಳಿದು ಬಂದಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page