ಅದ್ಧೂರಿಯಾಗಿ ನಡೆದ ಮೈಸೂರು ದಸರಾ ಕಂಬಳ! ಕೇವಲ 8.85 ಸೆಕೆಂಡ್‌ನಲ್ಲಿ 100ಮೀ. ಕ್ರಮಿಸಿ ಬೈಂದೂರು ವಿಶ್ವನಾಥ್ ದೇವಾಡಿಗ ದಾಖಲೆ ಓಟ!! ಅಂತಿಮ ವಿಜೇತರ ಪಟ್ಟಿ ಇಲ್ಲಿದೆ ನೋಡಿ!!

ಮೈಸೂರು ದಸರಾ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅದ್ಧೂರಿಯಾಗಿ ಕಂಬಳ ಕೂಟ ಆಯೋಜಿಸಲಾಯಿತು. ಕೆನೆ ಹಲಗೆ ವಿಭಾಗದಲ್ಲಿ ಸಸಿಹಿತ್ಲು ವೆಂಕಟ ಪೂಜಾರಿ ಅವರ ಕೋಣಗಳು 6.5 ಮೀಟರ್ ನಿಶಾನೆಗೆ ನೀರು ಚಿಮ್ಮಿಸಿ ಪ್ರಥಮ ಸ್ಥಾನ ಪಡೆದು 16 ಗ್ರಾಂ ಚಿನ್ನದ ಪದಕವನ್ನು ಗೆದ್ದವು. ನೇಗಿಲು, ಹಗ್ಗ ಹಾಗೂ ಅಡ್ಡಹಲಗೆ ವಿಭಾಗಗಳ ರೋಚಕ ಸ್ಪರ್ಧೆಯ ಸಂಪೂರ್ಣ ವಿಜೇತರ ಪಟ್ಟಿ ಇಲ್ಲಿದೆ.

Advertisement

ಸಾಂಸ್ಕೃತಿಕ ನಗರಿ ಮೈಸೂರಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದ ಅಂಗವಾಗಿ ಅದ್ಧೂರಿ ಕಂಬಳ ಕೂಟವನ್ನು ಆಯೋಜಿಸಲಾಗಿತ್ತು. ಕರಾವಳಿಯ ಜಾನಪದ ಕ್ರೀಡೆಯ ರೋಮಾಂಚನಕಾರಿ ಸ್ಪರ್ಧೆಯನ್ನು ಕಣ್ಣುಂಬಿಕೊಳ್ಳಲು ಸಾವಿರಾರು ಜನ ಸಾಗರವೇ ಹರಿದುಬಂದಿತ್ತು. ಕಂಬಳದ ಅತ್ಯಂತ ರೋಚಕ ವಿಭಾಗವಾದ ಕೆನೆ ಹಲಗೆ ಸ್ಪರ್ಧೆಯಲ್ಲಿ 11 ಜೊತೆ ಕೋಣಗಳು ಪಾಲ್ಗೊಂಡಿದ್ದು, 6.5 ಮೀಟರ್ ನಿಶಾನೆಗೆ ನೀರು ಚಿಮ್ಮಿಸಿ ಸಸಿಹಿತ್ಲು ವೆಂಕಟ ಪೂಜಾರಿ ಬೈಂದೂರು ಅವರ ಕೋಣಗಳು ಪ್ರಥಮ ಸ್ಥಾನ ಪಡೆದು 16 ಗ್ರಾಂ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡವು. ಕೋಣಗಳನ್ನು ಬೈಂದೂರು ಮಹೇಶ್ ಪೂಜಾರಿ ಅವರು ಯಶಸ್ವಿಯಾಗಿ ನಡೆಸಿದರು ಎಂದು ತಿಳಿದು ಬಂದಿದೆ.

Advertisement
Advertisement

ಇನ್ನು ಕೇವಲ 8.85 ಸೆಕೆಂಡ್‌ನಲ್ಲಿ 100ಮೀ. ಕ್ರಮಿಸಿ ಬೈಂದೂರು ವಿಶ್ವನಾಥ್ ದೇವಾಡಿಗ ದಾಖಲೆ ಓಟ ನಡೆಸಿದ್ದಾರೆಂದು ತಿಳಿದು ಬಂದಿದೆ.

ಕೆನೆ ಹಲಗೆ ವಿಭಾಗದಲ್ಲಿ 6.5 ಮೀಟರ್ ನಿಶಾನೆಗೆ ನೀರು ಚಿಮ್ಮಿಸಿ ಪ್ರಥಮ ಸ್ಥಾನ ಪಡೆದ ಸಸಿಹಿತ್ಲು ವೆಂಕಟ ಪೂಜಾರಿ ಬೈಂದೂರು ಅವರ ಕೋಣಗಳು 16 ಗ್ರಾಂ ಚಿನ್ನದ ಬಹುಮಾನವನ್ನು ತಮ್ಮದಾಗಿಸಿಕೊಂಡವು.

ಕೆನೆ ಹಲಗೆ :

  • ಪ್ರಥಮ – ಸಸಿಹಿತ್ಲು ವೆಂಕಟ ಪೂಜಾರಿ ಬೈಂದೂರು (ಹಲಗೆ ಏರಿದವರು: ಬೈಂದೂರು ಮಹೇಶ್ ಪೂಜಾರಿ)
  • ದ್ವಿತೀಯ – ವಾಮಂಜೂರು ನವೀನಚಂದ್ರ ಆಳ್ವ (ಹಲಗೆ ಏರಿದವರು: ಬೈಂದೂರು ಮಹೇಶ್ ಪೂಜಾರಿ)

ನೇಗಿಲು ಹಿರಿಯ :

  • ಪ್ರಥಮ – ಎಂಬತ್ತು ಬಡಗಬೆಟ್ಟು ಶ್ರೀಕಾಂತ್ ಶೆಟ್ಟಿ (ಓಡಿಸಿದವರು: ಕುಂದಾಬಾರಂದಾಡಿ ಸ್ವರೂಪ್)
  • ದ್ವಿತೀಯ – ಕಕ್ಕೆಪದವು ಪೆರ್ಗಾಲು ಬಾಬು ತನಿಯಪ್ಪ ಗೌಡ (ಓಡಿಸಿದವರು: ಕೃತಿಕ್ ಗೌಡ ಪೆರ್ಗಾಲ್)

ನೇಗಿಲು ಕಿರಿಯ :

  • ಪ್ರಥಮ – ಉಡುಪಿ ಕಕ್ಕುಂಜೆ ರಾಧಾ ನಿಲಯ ಸಂತೋಷ್ ಶಿವರಾಜ್ ಪೂಜಾರಿ (ಓಡಿಸಿದವರು: ಬೈಂದೂರು ವಿಶ್ವನಾಥ್ ದೇವಾಡಿಗ)
  • ದ್ವಿತೀಯ – ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ (ಓಡಿಸಿದವರು: ಕುಂದಬಾರಂದಾಡಿ ಮಾಸ್ತಿಕಟ್ಟೆ ಸ್ವರೂಪ್)

ಹಗ್ಗ ಹಿರಿಯ :

  • ಪ್ರಥಮ – ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಕೋಣಗಳು: ರಾಜ + ಶಬರೀಷ, ಓಡಿಸಿದವರು: ಕೃತಿಕ್ ಗೌಡ)
  • ದ್ವಿತೀಯ – ಎರ್ಮಾಳ್ ಪುಚ್ಚೊಟ್ಟು ಬಾಲಚಂದ್ರ ಲೋಕಯ್ಯ ಶೆಟ್ಟಿ (ಕೋಣಗಳು: ಮಣಿ + ಜಿಂಕೆ, ಓಡಿಸಿದವರು: ಪಡುಸಾಂತುರು ಪ್ರಥ್ವಿರಾಜ್ ಪೂಜಾರಿ)

ಹಗ್ಗ ಕಿರಿಯ :

  • ಪ್ರಥಮ – ಪದವು ಕಾನಡ್ಕ ಪ್ಲೇವಿ ಡಿಸೋಜಾ (ಓಡಿಸಿದವರು: ಕಾವೂರು ಸುದರ್ಶನ)
  • ದ್ವಿತೀಯ – ರೋಹಿತ್ ಹೆಗ್ಡೆ ಎರ್ಮಾಳ್ (ಓಡಿಸಿದವರು: ಶ್ರೀನಿವಾಸ ಗೌಡ)

ಅಡ್ಡ ಹಲಗೆ :

  • ಪ್ರಥಮ – ಇರುವೈಲು ದೊಡ್ಡಗುತ್ತು ಜಗದೀಶ್ ಶೆಟ್ಟಿ (ಹಲಗೆ ಏರಿದವರು: ತೆಕ್ಕಟ್ಟೆ ಸುದೀರ್ ದೇವಾಡಿಗ)
  • ದ್ವಿತೀಯ – ವಿಟ್ಲ ಕುಂಡಡ್ಕ ಮರುವಾಳ ಜಯಂತ್ ದಾಸ್ (ಹಲಗೆ ಏರಿದವರು: ಉಳ್ಳೂರು ಕಂದಾವರ ಗಣೇಶ್)

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 11 ಜೊತೆ
ಅಡ್ಡಹಲಗೆ: 12 ಜೊತೆ
ಹಗ್ಗ ಹಿರಿಯ: 13 ಜೊತೆ
ನೇಗಿಲು ಹಿರಿಯ: 38 ಜೊತೆ
ಹಗ್ಗ ಕಿರಿಯ: 19 ಜೊತೆ
ನೇಗಿಲು ಕಿರಿಯ: 58 ಜೊತೆ
ಒಟ್ಟು ಕೋಣಗಳ ಸಂಖ್ಯೆ: 151 ಜೊತೆ

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page