ಮೈಸೂರು ದಸರಾ ವಿಜಯ ದಶಮಿ ಜೋಡುಕರೆ ಕಂಬಳದಲ್ಲಿ ಭಾಗವಹಿಸುವ ಕಂಬಳದ ಕೋಣಗಳು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ದಿನಾಂಕ ಒಕ್ಟೋಬರ್ 16 ರಂದು ಮೆರವಣೆಗೆಯ ಮೂಲಕ ಹೊರಟು ಕುಶಾಲನಗರ ಸಂತೆ ಮೈದಾನದಲ್ಲಿ ವಿಶ್ರಾಂತಿ ಪಡೆಯಲಿದೆ.
ಕುಶಾಲನಗರ ಸಂತೆ ಮೈದಾನದಲ್ಲಿ ಕಂಬಳ ಕೋಣಗಳಿಗೆ ವಿಶ್ರಾಂತಿ ಪಡೆಯಲು ಬೇಕಾದ ಎಲ್ಲಾ ವ್ಯವಸ್ಥೆ ಗಳನ್ನು ಮಾಡುವುದಾಗಿ ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ರವರು ತಿಳಿಸಿದ್ದು, ಇದಕ್ಕಾಗಿ ಸ್ಥಳಿಯ ಅಡಳಿತ ದ ಅಧಿಕಾರಿಗೆ ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮೈಸೂರ ದಸರಾ ಕಂಬಳ ಸಮಿತಿಯ ಪದಾಧಿಕಾರಿಗಳಾದ ಮುರಳೀಧರ ರೈ ಮಠಂತಬೆಟ್ಟು, ಸುದೇಶ್ ಶೆಟ್ಟಿ, ರಂಜೀತ್ ಬಂಗೇರಾ, ಗಿರೀಶ್ ರೈ ಮೂಲೆ ಉದ್ಯಮಿಗಳಾದ ಜಗದೀಶ್ ರೈ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರಿಯವರು ಉಪಸ್ಥಿತರಿದ್ದರು.













