ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ನವರಾತ್ರಿಯ ಮೊದಲ ದಿನವಿಂದು. ಇಂದಿನ ಬಣ್ಣ ಕೇಸರಿ. ತಾಯಿ ಶೈಲಪುತ್ರಿಯ ಆರಾಧನೆಯಿಂದ ನಮ್ಮೆಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ.
” ವಂದೇ ವಾಂಭಿತಲಾಭಾಯ ಚಂದ್ರಾರ್ಧಕೃತಶೇಖರಂ ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ”
ನವದುರ್ಗೆಯರಲ್ಲಿ ಮೊದಲನೇ ರೂಪ ಶೈಲಪುತ್ರಿ ದೇವಿಯದ್ದು. ಈಕೆಯನ್ನು ಶುದ್ಧತೆ, ಶಕ್ತಿ, ಮತ್ತು ಭಕ್ತಿಯ ಸಾಕಾರವೆಂದು ಪೂಜಿಸಲಾಗುತ್ತದೆ. ಅವಳ ಹೆಸರು ಎರಡು ಸಂಸ್ಕೃತ ಪದಗಳಿಂದ ಬಂದಿದೆ. ಶೈಲ ಎಂದರೆ ಪರ್ವತ ಮತ್ತು ಪುತ್ರಿ ಎಂದರೆ ಮಗಳು. ಹೀಗಾಗಿ, ಅವಳನ್ನು ಹಿಮಾಲಯದ ಮಗಳು ಎಂದು ಪೂಜಿಸಲಾಗುತ್ತದೆ.













