ಕನ್ನಡದ ಪವರ್ಸ್ಟಾರ್ ದಿ| ಪುನೀತ್ ರಾಜ್‌ಕುಮಾರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪೋಸ್ಟ್ ಹಾಕಿದ ಬೆಂಗಳೂರಿನ ಯುವಕನಿಗೆ ಹೈಕೋರ್ಟ್ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿದೆ. ಅರ್ಜಿದಾರ ರಿತ್ವಿಕ್ ತನ್ನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿದ್ದ.
ಇಂಥ ಸಂದೇಶವನ್ನ ಏಕೆ ಹಾಕಿದ್ದೀರಿ? ಸಾಮಾಜಿಕ ಮಾಧ್ಯಮ ಬಳಸಬಹುದು ಅಂತಾ ಇಂತಾ ಪೋಸ್ಟ್ ಹಾಕಿದ್ದೀರಾ..? ಪುನೀತ್ ಅವರ ಸಾವಿನ ಸುದ್ದಿ ತಿಳಿದು ಇಂಥ ಸುದ್ದಿ ಹಾಕಬಹುದೇ? ಎಂದು ಕೋರ್ಟ್ ಯುವಕನ ತರಾಟೆಗೆ ತೆಗೆದುಕೊಂಡಿದೆ.
ವಿಚಾರಣೆ ನಡೆಯಲಿ ಬಿಡಿ, ಅಲ್ಲೇ ನಿರ್ಧಾರವಾಗಲಿ. ಯಾವ ಪದ ಬಳಸಲಾಗಿದೆ ಎಂಬುದು ನಿಮಗೆ ಗೊತ್ತೇ? ಪುನೀತ್ ಅವರು ರಾಜ್ ಕುಮಾರ್ ಅವರ ಪುತ್ರ. ಅವರು ನಿಧನರಾಗಿದ್ದಾರೆ. ಅವರಿಗೆ ಈ ಪದ ಬಳಕೆ ಮಾಡಲಾಗಿದೆ ಅಂತ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಅರ್ಜಿದಾರರ ಪರ ವಕೀಲೆ ಪದ್ಮಾವತಿ ವಾದ ಮಾಡಿದ್ದು, ರಿತ್ವಿಕ್ ಲಂಡನ್ ನಲ್ಲಿ ಹುಟ್ಟಿ ಬೆಳೆದಿದ್ದು. ಅವರಿಗೆ ಪೋಸ್ಟ್ ನ ಪರಿಣಾಮ ಗೊತ್ತಿರಲಿಲ್ಲ. ಪ್ರಮಾದ ಒಪ್ಪಿಕೊಂಡು ರಿತ್ವಿಕ್ ವಿಷಾದಿಸಿದ್ದಾನೆ. ಎರಡು ವರ್ಷಗಳ ಹಿಂದೆ ರಿತ್ವಿಕ್ ಭಾರತಕ್ಕೆ ಮರಳಿದ್ದಾನೆ ಎಂದಿದ್ದಾರೆ. ಪೋಸ್ಟ್ ರಿತ್ವಿಕ್‌ನ ಸ್ನೇಹಿತ ಹಾಕಿದ್ದಾನೆ. ಅರ್ಥಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡ್ತಿದ್ದಾನೆ. ಭವಿಷ್ಯದ ದೃಷ್ಟಿಯಿಂದ ಕ್ರಿಮಿನಲ್ ಪ್ರಕರಣ ರದ್ದು ಮಾಡುವಂತೆ ಮನವಿ ಮಾಡಿದ್ದಾರೆ. ರಿತ್ವಿಕ್ ಶರ್ಮಾ ಸಲ್ಲಿಸಿದ್ದ ಅರ್ಜಿ ಪರಿಗಣಿಸಿ ಹೈಕೋರ್ಟ್ ಕ್ರಿಮಿನಲ್ ಪ್ರಕರಣ ರದ್ದು ಮಾಡಿದೆ.













