2026-27ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ಮುಂದೂಡಿಕೆ ವಿಚಾರದಲ್ಲಿ ಉಂಟಾಗಿರೋ ಗೊಂದಲಗಳ ಬಗ್ಗೆ ಸ್ವತಃ ಶಿಕ಼್ಣ ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ. ಈಗಾಗಲೇ ಪರೀಕ್ಷೆಗಳಿಗೆ ತಾತ್ಕಾಲಿಕ ವೇಳ ಪಟ್ಟಿ ಸಿದ್ಧವಾಗಿದೆ. ಇದೇ ಸಮಯದಲ್ಲಿ ಜನಗಣತಿ ಹಿನ್ನಲೆ SSLC ಹಾಗೂ PUC ಎರಡೂ ಪರೀಕ್ಷೆಗಳು ಮುಂದೂಡಿಕೆ ಆಗೋ ಸಾಧ್ಯತೆ ಇದೆ ಎನ್ನುವ ವಿಚಾರ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದ್ರಿಂದ ಗೊಂದಲಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಮಹತ್ವದ ಮಾಹಿತಿ ನೀಡಿದ್ದಾರೆ.
ದ್ವಿತೀಯ ಪಿಯುಸಿ ಹಾಗೂ SSLC ಪರೀಕ್ಷೆ ನಿಗದಿಯಂತೆ ನಡೆಯಲಿದ್ದು, ಯಾವುದೇ ಸಂದರ್ಭದಲ್ಲೂ ಮುಂದೂಡಿಕೆ ಮಾಡಲ್ಲ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ನಿಗದಿಯಂತೆ ನಡೆಯಲಿದೆ SSLC ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಅವಧಿ ಮುಕ್ತಾಯವಾಗಿದ್ದು, ಪರೀಕ್ಷಾ ಪ್ರಾಧಿಕಾರ ಅಂತಿಮ ವೇಳಾಪಟ್ಟಿಯನ್ನ ಶೀಘ್ರವೇ ಪ್ರಕಟ ಮಾಡಲಿದೆ. ವೇಳಾಪಟ್ಟಿಯಂತೆ ಪರೀಕ್ಷೆ ನಡೆಯದೆ ಹೋದ್ರೆ ಮುಂದಿನ ಶೈಕ್ಷಣಿಕ ಸಾಲಿಗೆ ಸಮಸ್ಯೆ ಆಗಲಿದೆ. ಪರೀಕ್ಷೆ ವಿಳಂಬ ಆದ್ರೆ CET ಸೇರಿ ವಿವಿಧ ಕೋರ್ಸ್ ಕೌನ್ಸಲಿಂಗ್ ವಿಳಂಬವಾಗುತ್ತೆ. SIRಗೆ ಶಿಕ್ಷಕರ ನೇಮಕ ಹಿನ್ನಲೆ ಮಕ್ಕಳ ಕಲಿಕೆಗೆ ತೀವ್ರ ಅಡಚಣೆ ಉಂಟಾಗಲಿದ್ದು, 5 ತಿಂಗಳು ಶಾಲೆಯಿಂದ ಹೊರಗುಳಿದ ಶಿಕ್ಷಕರ ಜನಗಣತಿಗೆ ಬಳಕೆ ಮಾಡಿದ್ರೆ ಮತ್ತೆ ಸಮಸ್ಯೆ ಆಗುತ್ತೆ. ಹೀಗಾಗಿ ಜನಗಣತಿ ಮುಂದೂಡಿಕೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಫೆಬ್ರವರಿ 27ರಿಂದ SSLC ಪರೀಕ್ಷೆ ಹಾಗೂ ಮಾರ್ಚ್ 22 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿದ್ದು, ತಾತ್ಕಾಲಿಕ ಪರೀಕ್ಷೆ ವೇಳಾಪಟ್ಟಿ ಕೂಡ ಸಿದ್ದಪಡಿಸಿದೆ. ಇದಕ್ಕೆ ಆಕ್ಷೇಪನೆ ಸಲ್ಲಿಸಲು ಅಕ್ಟೋಬರ್ 22 ಕೊನೆಯ ಅವಕಾಶ ನೀಡಲಾಗಿತ್ತು. ದ್ವಿತೀಯ ಪಿಯುಸಿ ಪರೀಕ್ಷೆ-1: ಫೆಬ್ರವರಿ 27 ರಿಂದ ಮಾರ್ಚ್ 17, 2027 ರವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ-2 ಮೇ 3 ರಿಂದ ಮೇ 15, 2027 ರವರೆಗೆ ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳು: 2027ರ ಜನವರಿ ತಿಂಗಳಿನಿಂದ ಆರಂಭವಾಗಲಿವೆ. ಪರೀಕ್ಷಾ ಸಮಯ: ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಪರೀಕ್ಷೆ ನಡೆಯಲಿದ್ದು, ಪ್ರಶ್ನೆಪತ್ರಿಕೆ ಓದಲು ಹೆಚ್ಚುವರಿ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.













