ಅಶೋಕ್ ಕುಮಾರ್ ರೈಗಳ ಕೀಳು ಮಟ್ಟದ ಮಾತುಗಳು ಪುತ್ತೂರಿನ ದುರಾದೃಷ್ಟ!ಪುತ್ತೂರು ಶಾಸಕರ ಮಾತಿಗೆ ಪ್ರಸನ್ನ ಮಾರ್ತ ಕೆಂಡಾಮಂಡಲ!!

ಕರ್ನಾಟಕದಲ್ಲಿ ಸ್ಟಿಂಗ್ ಸಮರ ತಾರಕಕ್ಕೇರಿದೆ. ಸ್ಟಿಂಗ್ ಆಪರೇಷನ್ ನಲ್ಲಿ ಪುತ್ತೂರಿನ ಹೆಸರು ಮುನ್ನಲೆಗೆ ಬಂದಾಗ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಾಧ್ಯಕ್ಷ ಸತೀಶ್ ಕುಂಪಲ ರಿಯಾಕ್ಟ್ ಮಾಡಿದ್ದರು. ಇದನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಖಂಡಿಸಿ ಕುಂಪಲ ಅವರನ್ನು ಟೀಕಿಸಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷ ಪ್ರಸನ್ನ ಮಾರ್ತ ತೀವ್ರವಾಗಿ ಖಂಡಿಸಿದ್ದಾರೆ.

Advertisement

Advertisement
Advertisement

ಈ ಕುರಿತು ಅವರು ನೀಡಿದ ಮಾಧ್ಯಮ ಪ್ರಕಟಣೆ ಹೀಗಿದೆ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯಯರವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಇವರು ನೀಡಿದ ಹೇಳಿಕೆ ಉಲ್ಲೇಖಿಸಿ ಬಿಜೆಪಿ ದ.ಕ ಜಿಲ್ಲೆ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಇವರು ಪತ್ರಿಕಾ ಮಾಧ್ಯಮದಲ್ಲಿ ಪುತ್ತೂರು ಎಂಎಲ್ ಎ ಟಿಕೆಟ್ ಗೋಸ್ಕರ ಸ್ಟಿಂಗ್ ಆಪರೇಷನ್ ಆಗಿದೆ ಹಾಗೂ ದ.ಕ ಜಿಲ್ಲೆಯಲ್ಲಿ ಈ ರೀತಿಯಾಗಿ ಟಿಕೆಟ್ ಹಂಚಿಕೆಯಾಗಿದೆ ಇದು ತನಿಖೆಯಾಗಬೇಕು ಎಂದು ಒತ್ತಾಯ ಮಾಡಿ ಹೇಳಿಕೆ ನೀಡಿದ್ದರು. ಅವರ ಮಾತು ದ.ಕ ಜಿಲ್ಲಾ ಕಾಂಗ್ರೇಸ್ ಹಾಗೂ ಪುತ್ತೂರು ಟಿಕೆಟ್ ವಿಚಾರವಾಗಿ ನಡೆದ ಸ್ಟಿಂಗ್ ಆಪರೇಷನ್ ತನಿಖೆ ನಡೆಸಬೇಕು ಎಂದು ಮಾತ್ರ ಆಗಿತ್ತು. ಆದರೆ ಪುತ್ತೂರಿನ ಶಾಸಕರು ತಾನು ಒಬ್ಬ ಜನಪ್ರತಿನಿಧಿ ಇಲ್ಲಿನ ಶಾಸಕ ಯಾವ ರೀತಿ ಮಾತನಾಡಬೇಕು ಎಂಬುದು ತಿಳಿಯದೆ ಒಂದು ಅವಹೇಳನಕಾರಿ ಶಬ್ದಗಳ ಮೂಲಕ ಜಿಲ್ಲಾ ಬಿಜೆಪಿ ಅಧ್ಯಕ್ಷರ ವಿರುದ್ಧ ಮಾಧ್ಯಮದಲ್ಲಿ ಪ್ರಕಟಣೆ ನೀಡಿರುವುದು ಪುತ್ತೂರು ವಿಧಾನಸಭಾಕ್ಷೇತ್ರದ ಜನತೆಗೆ ಮಾಡಿರುವ ಅವಮಾನ ಆಗಿದೆ.

ತಾನು ಈ ಪ್ರಕರಣದಲ್ಲಿ ಇಲ್ಲ ಎಂಬ ಬಗ್ಗೆ ಸರಕಾರದ ಮೂಲಕ ತನಿಖೆಗೆ ಒತ್ತಾಯ ಮಾಡಿ ಅದನ್ನು ಪ್ರೂವ್ ಮಾಡುವ ಕೆಲಸ ಅಶೋಕ್ ಕುಮಾರ್ ರೈಮಾಡಬೇಕು. ಅವನು ಈ ರೀತಿ ದ.ಕ ಜಿಲ್ಲೆಯ ರಾಜಕೀಯ ಇತಿಹಾಸಕ್ಕೆ ಅವಮಾನ ಮಾಡಿದವರ ತನಿಖೆ ಮಾಡಿಸುವ ಬಗ್ಗೆ ಮಾತನಾಡಬೇಕಿತ್ತು ಅದನ್ನು ಬಿಟ್ಟು ತನಿಕೆ ಮಾಡಿ ಎಂದವರ ಬಗ್ಗೆ ಕೀಳು ಮಾತುಗಳನ್ನು ಆಡಿರುವುದು ಪುತ್ತೂರಿನ ದುರಾದೃಷ್ಟಕರ, ಇದು ಕಾಂಗ್ರೇಸಿನ ನೈತಿಕತೆಯನ್ನು ಪ್ರತಿಬಿಂಬಿಸುತ್ತದೆ. ಪುತ್ತೂರಿನಲ್ಲಿ ಬಿಜೆಪಿ ಯಾವತ್ತೂ ಪ್ರೀತಿ ವಿಶ್ವಾಸದ ರಾಜಕಾರಣ ಮಾಡುತ್ತದೆಯೇ ಹೊರತು ದ್ವೇಷದ ರಾಜಕಾರಣ ಮಾಡುವುದಿಲ್ಲ. ತಮ್ಮದೆ ಸರಕಾರದ ಸಚಿವರ ಹೇಳಿಕೆಗಳ ಆಧಾರದಲ್ಲಿ ಮಾತನಾಡಿದ ದ.ಕ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ದ ಏಕ ವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಅಶೋಕ್ ರೈ ಇವರಿಗೆ, ದ.ಕ ಜಿಲ್ಲಾ ಕಾಂಗ್ರೇಸಿಗೆ, ದ.ಕ ಜಿಲ್ಲಾ ರಾಜಕೀಯಕ್ಕೆ ಕಪ್ಪು ಚುಕ್ಕೆ ತಂದ ಕಾಂಗ್ರೇಸಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ . ಮುಂದಿನ ಬೆಳವಣಿಗೆಯ ಕುರಿತು ಇನ್ನಷ್ಟೇ ಕಾದು ನೋಡಬೇಕಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page