ಪುತ್ತೂರು : ಇಲ್ಲಿನ ಶಾರದಾ ಭಜನಾ ಮಂದಿರದ ಆಶ್ರಯದಲ್ಲಿ ನಡೆಯುವ ವೈಭವದ “ಪುತ್ತೂರು ದಸರಾ 2026″ರಲ್ಲಿ ರೀಲ್ಸ್ ವಿಡಿಯೋ ಮಾಡಿ ಬಹುಮಾನ ಗೆಲ್ಲುವ ಸುವರ್ಣವಕಾಶವನ್ನು ಸಮಿತಿ ನೀಡಿದ್ದು, ವಿಜಯಶಾಲಿಗಳು ಯಾರೆಂಬುದು ಇಂದು ಸಂಜೆ 6 ಗಂಟೆ ಘೋಷಣೆಯಾಗಲಿದೆ.
“ರೀಲ್ಸ್ ಕಂಟೆಸ್ಟ್ 2026” (ಕ್ರಿಯೇಟ್ ರೀಲ್ಸ್ ವಿನ್ ಬಿಗ್) ಎಂಬ ಹೆಸರಿನೊಂದಿಗೆ ಕಂಟೆಂಟ್ ಕ್ರಿಯೇಟರ್ಸ್ಗೆ ಅವಕಾಶ ನೀಡಲಾಗಿದ್ದು ಮೊದಲ ಬಹುಮಾನವಾಗಿ 10 ಸಾವಿರ ರೂ, ಎರಡನೇ ಬಹುಮಾನವಾಗಿ 6 ಸಾವಿರ ಹಾಗೂ ಮೂರನೇ ಬಹುಮಾನವಾಗಿ 4 ಸಾವಿರ ರೂಪಾಯಿಗಳು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಇದೀಗ ಇಮ್ಮಡಿಗೊಂಡಿದೆ.













