ಪುತ್ತೂರು ದೇವಸ್ಥಾನದ ಒತ್ತುವರಿ ಜಾಗ ಸ್ವಾಧೀನ ಪ್ರಕ್ರಿಯೆ ಪುನರಾರಂಭ! ಒಂದು ವಾರದ ಕಾಲವಕಾಶ ನೀಡಿದ ಶಾಸಕರು!!

ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒತ್ತುವರಿ ಜಾಗ ಸ್ವಾಧೀನ ಪ್ರಕ್ರಿಯೆ 2 ತಿಂಗಳ ಬಳಿಕ ಮತ್ತೆ ಪುನರಾರಂಭಗೊಂಡಿದೆ. ಇತ್ತೀಚೆಗೆ ನೆಲ್ಲಿಕಟ್ಟೆಯಲ್ಲಿ ಒಂದು ಮನೆಯನ್ನು ದೇವಳದ ಅಧೀನಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಸೆ.26ರಂದು ಮುಖ್ಯರಸ್ತೆ ಬದಿಯಲ್ಲೇ ದೇವಳದ ಹೆಸರಿನಲ್ಲಿರುವ ಮತ್ತೊಂದು ಜಾಗವನ್ನು ವಶಕ್ಕೆ ಪಡೆಯಲು ಮುಂದಾದಾಗ, ಅಲ್ಲಿದ್ದವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶಾಸಕರು ಒಂದು ವಾರದ ಕಾಲಾವಕಾಶ ನೀಡಿದರು. ವಾರಸುದಾರರ ಹೆಸರಿನಲ್ಲಿರುವ ಮೂಲ ದಾಖಲೆಗಳಿದ್ದಲ್ಲಿ ದೇವಳದ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
35 ಸೆಂಟ್ಸ್ ಜಾಗ ಮಹಾಲಿಂಗೇಶ್ವರ ದೇವಸ್ಥಾನದ ಹೆಸರಿನಲ್ಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ, ಶಾಸಕ ಅಶೋಕ್‌ ಕುಮಾ‌ರ್ ರೈ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಬಂದು ವೀಕ್ಷಣೆ ಮಾಡಿದರು. ಈ ವೇಳೆ ಆ ಸ್ಥಳದಲ್ಲಿದ್ದ ಎವಿಲಿನ್ ಅವರ ಪುತ್ರ ರೋಶನ್ ಮತ್ತು ಹಂಚಿನ ಮನೆಯಲ್ಲಿ ವಾಸ್ತವ್ಯ ಇರುವ ಪ್ರವೀಣ್‌ ಅವರು ಶಾಸಕರ ಜೊತೆ ಮಾತನಾಡಿ ಇದು ನಮ್ಮ ದೊಡ್ಡಪ್ಪ ಚಾರ್ಲ್ಸ್ ಲಸ್ರಾದೋ ಅವರ ಜಾಗ ಅದಕ್ಕೆ ದಾಖಲೆಯೂ ಇದೆ. ಅವರ ಮಕ್ಕಳು ಈಗ ಬೆಂಗಳೂರಿನಲ್ಲಿದ್ದಾರೆ ಅವರು ಬಂದು ಮಾತನಾಡುತ್ತೇನೆಂದು ಹೇಳಿದ್ದರಿಂದ ಕಾಲಾವಕಾಶ ನೀಡುವಂತೆ ಅವರು ಮನವಿ ಮಾಡಿದರು.

Advertisement

ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಳದ ಹೆಸರಿನಲ್ಲಿರುವ ಜಾಗದ ಕುರಿತು ಶಾಸಕರಿಗೆ ಮಾಹಿತಿ ನೀಡಿದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ದೇವಸ್ಥಾನದ ಜಾಗಗಳು ಎಲ್ಲೆಲ್ಲಿ ಇದೆಯೋ ಅದನ್ನು ದೇವಸ್ಥಾನಕ್ಕೆ ಮರು ಸ್ವಾಧೀನ ಮಾಡುವಂತೆ ಸರಕಾರದ ಸುತ್ತೋಲೆ ಇದೆ. ನೀವು ಇವತ್ತು ಒಂದು ವಾರದ ಸಮಯ ಕೇಳಿದ್ದೀರಿ. ಹಾಗಾಗಿ ನಿಮ್ಮಲ್ಲಿ ದಾಖಲೆ ಇದ್ದರೆ ಒಂದು ವಾರದ ಒಳಗೆ ದೇವಸ್ಥಾನದ ಕಚೇರಿಗೆ ನೀಡಿ. ಮುಂದಿನ ಶನಿವಾರದ ಒಳಗೆ ದಾಖಲೆ ನೀಡಿ ಎಂದು ಶಾಸಕರು ತಿಳಿಸಿದರು. ಜೊತೆಗೆ ಮುಂದಿನ ಒಂದು ವಾರದ ಕಾಲವಕಾಶ ನೀಡುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್‌ ಭಟ್‌ ಪಂಜಿಗುಡ್ಡೆ ಅವರಲ್ಲಿ ತಿಳಿಸಿದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page