ಪುತ್ತೂರು ತಾಲೂಕು ಟಿಪ್ಪರ್ ಮಾಲಕರ ಸಂಘ ಅಸ್ತಿತ್ವಕ್ಕೆ!!

ಟಿಪ್ಪರ್‌ ಮಾಲಕರ ಸಂಘದ ಸದಸ್ಯ ಕ್ಯಾಪ್ಟನ್‌ ರೋಡ್‌ಲೈನ್ಸ್‌ ರಮೀಜ್‌ ಮತ್ತು ತಂಡ ಸಂಘಟಿತರಾಗಿ, ಒಗ್ಗಟ್ಟಿನಿಂದ ಟಿಪ್ಪರ್ ಮಾಲಕರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಟಿಪ್ಪರ್ ಮಾಲಕರ ಸಂಘ ರಚನೆಗೊಂಡಿದೆ.

Advertisement

ಪುತ್ತೂರು ತಾಲೂಕು ಟಿಪ್ಪರ್ ಮಾಲಕರ ಸಂಘವು ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ಅಧ್ಯಕ್ಷರಾಗಿ ಸಲೀಂ ಪಾಪು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಜಲೀಲ್ ಅಮರ್ ಪಡೀಲ್ ಅವರನ್ನು ಆಯ್ಕೆ ಮಾಡಲಾಯಿತು, ಗೌರವ ಸಲಹೆಗಾರರಾಗಿ ರಝಾಕ್ ಮಾಂತೂರು, ಪ್ರಧಾನ ಕಾರ್ಯದರ್ಶಿಯಾಗಿ ಅನ್ವೇಶ್ ರೈ ನೇಸರ, ಕೋಶಾಧಿಕಾರಿಯಾಗಿ ದಿನೇಶ್ ಕಾವೇರಿ, ಉಪಾಧ್ಯಕ್ಷರಾಗಿ ಕೇಶವ ಶ್ರೀ ದೇವಿ ಮತ್ತು ನವಾಜ್ ಫ್ಯಾಮಿಲಿ ಗ್ರೂಪ್ ಇವರನ್ನು ಆಯ್ಕೆ ಮಾಡಲಾಗಿದೆ. ಜೊತೆ ಕಾರ್ಯದರ್ಶಿಯಾಗಿ ರಿಯಾಝ್ ಕಬಕ ಮತ್ತು ಸುಕೇಶ್ ಕಬಕ ಇವರನ್ನು ಆಯ್ಕೆ ಮಾಡುವ ಜೊತೆಗೆ ಇತರ ಒಟ್ಟು ಹದಿನೈದು ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಯಿತು. ದಿನೇಶ್ ಕಾವೇರಿ ಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ರಝಾಕ್ ಮಾಂತೂರು ಹಾಗೂ ಜಲೀರ್ ಪಡೀಲ್ ರವರು ಸಂಘದ ಸದಸ್ಯರಿಗೆ ಸಲಹೆ ಸೂಚನೆಗಳನ್ನು ನೀಡಿದರು. ರಮೀಜ್‌ ಸ್ವಾಗತಿಸಿ ಸಭಾಕಾರ್ಯಕ್ರಮದಲ್ಲಿ ಖಾದರ್ ಕಂಜ್ ವಂದಿಸಿದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page