ರಾಜೀವ ಗಾಂಧಿ ಆರೋಗ್ಯ ವಿವಿ ಆಶ್ರಯ ಹಾಗೂ ಕುಲಪತಿಗಳಾದ ಡಾ ಭಗವಾನ್ ಅವರ ಮಾರ್ಗದರ್ಶನದಲ್ಲಿ ನವೆಂಬರ್ 20 ಮತ್ತು 21 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜೀವ ಗಾಂಧಿ ಆರೋಗ್ಯ ವಿವಿ ಯ 2ನೇ ರಾಜ್ಯ ಮಟ್ಟದ ವೈದ್ಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಡಾ ಪಿ ಎಸ್ ಯೋಗಣ್ಣ ಅವರನ್ನ ಆರಿಸಲಾಗಿದೆ.
ಸಮ್ಮೇಳನ ಆಯೋಜನಾ ಸಮಿತಿಯ ಉಪಾಧ್ಯಕ್ಷರಾಗಿ ಡಾ ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಹಾಗೂ ಸಂಘಟನಾ ಕಾರ್ಯದರ್ಶಿಯನ್ನಾಗಿ ಡಾ ಆರ್.ಕೆ ಸರೋಜಾ ಹಾಗು 35 ಮಂದಿ ಹಿರಿಯ ವೈದ್ಯ ಸಾಹಿತಿಗಳ ಹಾಗು ಸಂಘಟಕರ ಸಮಿತಿ ಹಾಗೂ ಉಪಸಮಿತಿಗಳನ್ನ ರಾಜೀವ್ ಗಾಂಧಿ ಆರೋಗ್ಯ ವಿವಿಯ ಸಿಂಡಿಕೇಟ್ ಹಾಲ್ ನಲ್ಲಿ ಜರುಗಿದ ಸಭೆಯಲ್ಲಿ ಆರಿಸಲಾಯಿತು.













