ಪ್ರಶಾಂತನಿಗಾಗಿ ವಿನಾಯಕನಲ್ಲಿ ವಿಶೇಷ ಪೂಜೆ!! ಚಿನ್ನದ ಅಂಬಾರಿ ಹೊರಲು ಸಿದ್ಧನಾಗಿದ್ದಾನೆ ದುಬಾರೆ ಕ್ಯಾಪ್ಟನ್‌!!

2026ರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕಾಗಿ ಸಿದ್ಧತೆಗಳು ನಡೆಯುತ್ತಿದ್ದು, ಈ ಬಾರಿ ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿಯನ್ನು ಹೊರುವ ಮಹತ್ವದ ಜವಾಬ್ದಾರಿಯನ್ನು ಪ್ರಶಾಂತ ಆನೆಗೆ ನೀಡಲಾಗಿದೆ. ಪ್ರಶಾಂತ ಆನೆ, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಯಶಸ್ವಿಯಾಗಿ ಹೊತ್ತು ಸಾಗಲಿ ಎಂದು ಕೋಟ್ಯಾಂತರ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

Advertisement

ಈ ನಿಟ್ಟಿನಲ್ಲಿ, ಮೈಸೂರಿನ ಚಾಮರಾಜ ಮೊಹಲ್ಲಾದ ಕುರುಬಗೇರಿಯಲ್ಲಿರುವ ಈಶ್ವರ ಸೇವಾ ಸಮಿತಿಯು ವಿಶೇಷ ಪೂಜೆಯನ್ನು ಆಯೋಜಿಸಿತ್ತು. ಯಾವುದೇ ವಿಘ್ನಗಳು ಎದುರಾಗದಿರಲಿ, ಎಲ್ಲವೂ ಸುಗಮವಾಗಿ ನಡೆಯಲಿ ಎಂದು ವಿಘ್ನನಿವಾರಕ ವಿನಾಯಕನಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಇದು ಪ್ರಶಾಂತ ಆನೆಗೆ ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯಾಗಿರುವುದರಿಂದ, ಸಮಿತಿಯ ಸದಸ್ಯರು ಮತ್ತು ಸಾರ್ವಜನಿಕರು ಆತನ ಯಶಸ್ಸಿಗಾಗಿ ಹೃತ್ಪೂರ್ವಕವಾಗಿ ಹಾರೈಸಿದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page