ಬೈಕ್‌ಗೆ ಹಿಂದಿನಿಂದ ಥಾರ್‌ ಡಿಕ್ಕಿ ; ಆಲಂಕಾರಿನ ವ್ಯಕ್ತಿ ಮೃತ್ಯು

ಕಡಬ: ಆಲಂಕಾರು ಗ್ರಾಮದ ಆಚಾರಿಕೊಟ್ಟ ಎಂಬಲ್ಲಿ ಸೆ .25ರ ರಾತ್ರಿ ಕಪ್ಪು ಬಣ್ಣದ ಥಾರ್ ವಾಹನವು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಕಡಬ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Advertisement

ಮೃತರನ್ನು ಆಲಂಕಾರು ನಾಡ್ತಿಲ ನಿವಾಸಿ ಲೋಕೇಶ್ ಎಂದು ಗುರುತಿಸಲಾಗಿದೆ. ದೂರಿನ ಪ್ರಕಾರ, ಸೆ.25ರ ರಾತ್ರಿ 9.45ರ ಸುಮಾರಿಗೆ ಲೋಕೇಶ್ ಅವರು ತಮ್ಮ ಟಿವಿಎಸ್ ವಿಕ್ಷಣ್ ಬೈಕ್ (KA-21-Y-5006) ನಲ್ಲಿ ಅಲಂಕಾರು ಪೇಟೆಯಿಂದ ಆಚಾರಿಕೊಟ್ಟ ಕಡೆಗೆ ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಮಹೀಂದ್ರಾ ಥಾರ್ (KA-21-MB-0233) ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಲೋಕೇಶ್ ಅವರ ತಲೆ, ಕೈಕಾಲುಗಳಿಗೆ ತೀವ್ರ ಗಾಯಗಳಾಗಿವೆ.

Advertisement
Advertisement


ಗಾಯಾಳುವನ್ನು ಮೊದಲು ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ, ಬಳಿಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಅಪಘಾತದ ಬಳಿಕ ಫಾರ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ರಂಜಿತ್ ಬಿ. ಎಂಬುವವರ ದೂರಿನ ಮೇರೆಗೆ ಕಡಬ ಪೊಲೀಸರು ಬಿಎನ್‌ಎಸ್ ಕಲಂ 281, 106 ಹಾಗೂ ಐಎಂವಿ ಕಾಯ್ದೆ ಕಲಂ 134(a & b) ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page